ಮೆಕ್ಸಿಕೋ ಸಿಟಿ: 3 ವರ್ಷದ ಬಾಲಕಿ ಅನಾರೋಗ್ಯದಿಂದ ಸಾವನ್ನಪ್ಪಿರುವುದಾಗಿ ಘೋಷಿಸಿದ ಬಳಿಕ ಆಕೆಯ ಅಂತ್ಯಕ್ರಿಯೆಯ ವೇಳೆ ಎಚ್ಚರಗೊಂಡಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ದುರಾದೃಷ್ಟವಶಾತ್ ಬಾಲಕಿಯನ್ನು ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆ ಸಾವನ್ನಪ್ಪಿದ್ದಾಳೆ.
ವರದಿಗಳ ಪ್ರಕಾರ ಮಧ್ಯ ಮೆಕ್ಸಿಕೋ ಸ್ಯಾನ್ ಲೂಯಿಸ್ ಪೊಟೋಸಿ ರಾಜ್ಯದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 3 ವರ್ಷದ ಬಾಲಕಿ ಕ್ಯಾಮಿಲಾ ಕೆಲವು ದಿನಗಳಿಂದ ವಾಂತಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಅವಳನ್ನು ತಾಯಿ ಮೇರಿ ಜೇನ್ ಮೆಂಡೋಜಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
Advertisement
Advertisement
ಬಾಲಕಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಯಿತು. ಆದರೆ ಬಾಲಕಿಯ ಸ್ಥಿತಿ ಮತ್ತೆ ಹದಗೆಟ್ಟಿದ್ದರಿಂದ ಮತ್ತೆ ಅದೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಈ ವೇಳೆ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಧ್ವನಿಪೆಟ್ಟಿಗೆ ಶಸ್ತ್ರಚಿಕಿತ್ಸೆ ವೇಳೆ ಬಾಲಕಿ ಸಾವು
Advertisement
ಬಳಿಕ ಬಾಲಕಿಯ ಅಂತ್ಯಕ್ರಿಯೆಗೆ ತಯಾರಿ ನಡೆಯುತ್ತಿದ್ದ ವೇಳೆ ಗಾಜಿನ ಶವಪೆಟ್ಟಿಗೆಯಲ್ಲಿ ಆಕೆಯ ಕಣ್ಣು ಚಲಿಸುತ್ತಿದ್ದುದು ಕುಟುಂಬದವರ ಗಮನಕ್ಕೆ ಬಂದಿದೆ. ಬಳಿಕ ಆಕೆಯ ನಾಡಿಯನ್ನು ಪರೀಕ್ಷಿಸಿದಾಗ ಬಾಲಕಿ ಜೀವಂತವಾಗಿರುವುದು ದೃಢವಾಗಿದೆ.
Advertisement
ಬಾಲಕಿಯನ್ನು ತಕ್ಷಣವೇ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಕೆಯನ್ನು ಉಳಿಸಲಾಗಲಿಲ್ಲ. ಬಳಿಕ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಪೊಲೀಸರು ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಜಾಮೀನಿನ ಮೇಲೆ ಹೊರಬಂದವನು ಪತ್ನಿಯನ್ನು ಇರಿದು ಕೊಂದ