ರಾಯಚೂರು: ಬಾಲಕಿಯೊಬ್ಬಳ ಧ್ವನಿಪೆಟ್ಟಿಗೆ ಶಸ್ತ್ರಚಿಕಿತ್ಸೆ ವೇಳೆ ಸಾವನ್ನಪ್ಪಿದ ಘಟನೆ ರಾಯಚೂರು ನಗರದ ಡಾ.ಪಠಾಣ್ ಇಎನ್ಟಿ ನರ್ಸಿಂಗ್ ಹೋಂನಲ್ಲಿ ನಡೆದಿದೆ.
ಮೃತ ದುರ್ದೈವಿ ಬಾಲಕಿಯನ್ನು ಸಾಯಿಕೀರ್ತನಾ (6) ಎಂದು ಗುರುತಿಸಲಾಗಿದೆ. ಈಕೆ ರಾಯಚೂರು ತಾಲೂಕಿನ ಕೊಸಗಿ ಗ್ರಾಮದ ಅಂಜಿ ಜ್ಯೋತಿ ದಂಪತಿಯ ಮಗಳು. ಸದ್ಯ ಪೋಷಕರು ಹಾಗೂ ಬಾಲಕಿ ಸಂಬಂಧಿಕರು ಆಸ್ಪತ್ರೆ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದಂಪತಿ ಮಗಳು ಸಾಯಿ ಕೀರ್ತನಾಗೆ ಮಾತು ಬಾರದ ಹಿನ್ನೆಲೆಯಲ್ಲಿ ಕಳೆದ ವರ್ಷ ಇದೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಪುನಃ ಧ್ವನಿ ಹೋಗಿದ್ದ ಹಿನ್ನೆಲೆ ಮತ್ತೆ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದರು. ಆದರೆ ಶಸ್ತ್ರಚಿಕಿತ್ಸೆ ವೇಳೆ ಬಾಲಕಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಮೃತಪಟ್ಟಿದ್ದಾರೆ.
ಆಸ್ಪತ್ರೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಬಾಲಕಿಯ ಸಂಬಂಧಿಕರು ಮುಂದಾಗಿದ್ದಾರೆ. ಇದನ್ನೂ ಓದಿ: ಜಾಮೀನಿನ ಮೇಲೆ ಹೊರಬಂದವನು ಪತ್ನಿಯನ್ನು ಇರಿದು ಕೊಂದ