ಕೋಲ್ಕತ್ತಾ: ಮೊಬೈಲ್ (Smart Phone) ಖರೀದಿಸಲು ಹಣ ಬೇಕೆಂದು 16 ವರ್ಷದ ಹುಡುಗಿಯೊಬ್ಬಳು (Girl) ರಕ್ತವನ್ನು (Blood) ಮಾರಾಟ ಮಾಡಲು ಹೋದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ.
ದಕ್ಷಿಣ ದಿನಾಜ್‍ಪುರದ ತಪನ್ ಪೊಲೀಸ್ ಠಾಣೆಯ ಕರ್ದಾ ನಿವಾಸಿಯಾಗಿರುವ ಆಕೆ 12ನೇ ತರಗತಿ ಓದುತ್ತಿದ್ದಾಳೆ. ಆಕೆ ಆನ್‍ಲೈನ್‍ಲ್ಲಿ 9,000 ರೂ. ಮೌಲ್ಯದ ಸ್ಮಾರ್ಟ್‍ಫೋನ್ ಅನ್ನು ಆರ್ಡರ್ ಮಾಡಿದ್ದಳು. ಆದರೆ ಆಕೆಯ ಬಳಿ ಅಷ್ಟೊಂದು ಹಣವಿರಲಿಲ್ಲ.
Advertisement
Advertisement
ಇದರಿಂದಾಗಿ ಆಕೆ ಬಲೂರ್‍ಘಾಟ್‍ನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತವನ್ನು ಕೊಡಲು ನಿರ್ಧರಿಸಿದ್ದಾಳೆ. ಈ ಹಿನ್ನೆಲೆಯಲ್ಲೇ ಆಕೆ ಆಸ್ಪತ್ರೆಗೆ ತೆರಳಿ ಅಲ್ಲಿ, ರಕ್ತ ನೀಡುತ್ತೇನೆ ಅದರ ಬದಲು ಎಷ್ಟು ಹಣ ನೀಡುತ್ತೀರಿ ಎಂದು ಕೇಳಿದ್ದಾಳೆ. ಇದರಿಂದ ಅಲ್ಲಿನ ಉದ್ಯೋಗಿಗಳು ಅನುಮಾನಗೊಂಡಿದ್ದಾರೆ. ಇದನ್ನೂ ಓದಿ: ಇಎಂಐಯಲ್ಲಿ ಸ್ಮಾರ್ಟ್ ಫೋನ್ ಕೊಡಿಸಿದ ಪತಿ- ವಿಷಯ ತಿಳಿದ ಪತ್ನಿ ಆತ್ಮಹತ್ಯೆ
Advertisement
Advertisement
ಕೂಡಲೇ ಆಸ್ಪತ್ರೆ ಸಿಬ್ಬಂದಿ ಚೈಲ್ಡ್ ಕೇರ್ ಇಲಾಖೆಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚೈಲ್ಡ್ ಕೇರ್ ಇಲಾಖೆಯ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ, ಅಪ್ರಾಪ್ತೆಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಿಜವಾದ ಸಂಗತಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕೆಲಸ ಬಿಡಲು ನಿರಾಕರಿಸಿದ ಪತ್ನಿಯನ್ನು ಕ್ರೂರವಾಗಿ ಥಳಿಸಿದ