ಬೆಂಗಳೂರು: ಯುವತಿಯೊಬ್ಬಳು ಮನನೊಂದು ನಗರದ ಕಮೀಷನರ್ ಆಫೀಸ್ ನಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡದಿದೆ.
ಐಬಿಎಂ ಉದ್ಯೋಗಿಯಾಗಿರುವ ರೂಪ, ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಗಂಗಮ್ಮಗುಡಿ ಪೊಲೀಸ್ ಠಾಣಾ ವ್ಯಾಪ್ತಿ ನಿವಾಸಿ ರೂಪ, ಲಕ್ಷ್ಮಣ್ ಅನ್ನೋ ಯುವಕನನ್ನು ಪ್ರೀತಿಸುತ್ತಿದ್ದಳು. ಮದುವೆ ಆಗ್ತೀನಿ ಅಂತಾ ನಂಬಿಸಿದ್ದ ಲಕ್ಷ್ಮಣ್ ಈಗ ಬೇರೊಂದು ಹುಡುಗಿಯ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾನಂತೆ.
ಇದರಿಂದ ಮನನೊಂದ ಯುವತಿ ಗಂಗಮ್ಮಗುಡಿ ಪೊಲೀಸರಿಗೆ ದೂರು ನೀಡಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನಗರ ಪೊಲೀಸ್ ಕಮೀಷನರ್ ಗೆ ದೂರು ಕೊಡಲು ಬಂದ ವೇಳೆ ಅಲ್ಲೂ ನ್ಯಾಯ ಸಿಕ್ಕಿಲ್ಲವೆಂದು ಯುವತಿ ಕಮೀಷನರ್ ಆಫೀಸ್ ನಲ್ಲೇ ವಿಷ ಸೇವಿಸಿ ಕುಸಿದು ಬಿದ್ದಿದ್ದಾಳೆ.
ಯುವತಿ ಬಿದ್ದಿರುವುದನ್ನು ಪೊಲೀಸರು ನೋಡಿಯೂ ನೋಡದಂತೆ ಇದ್ದರು ಎನ್ನಲಾಗಿದೆ. ಸ್ವಲ್ಪ ಸಮಯದ ಬಳಿಕ ರೂಪಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ.