ಕೋಲ್ಕತ್ತಾ: ಆಟವಾಡೋ ಗನ್ ಎಂದು ತಿಳಿದು ಮಗಳು ತಾಯಿಗೆ ಶೂಟ್ ಮಾಡಿದ ಘಟನೆ ಭಾನುವಾರ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿದೆ.
ಕಾಕೋಲಿ ಜಾನಾ ಗುಂಡಿನ ಏಟಿನಿಂದ ಆಸ್ಪತ್ರೆಯಲ್ಲಿ ಬಳುತ್ತಿರುವ ಮಹಿಳೆ. ಆಟವಾಡೋ ಪಿಸ್ತೂಲ್ ಎಂದು ತಿಳಿದು ತಾಯಿಯೇ ಆ ಪಿಸ್ತೂಲ್‍ನನ್ನು ತನ್ನ ಮಗಳಿಗೆ ನೀಡಿದ್ದರು. ಬಾಲಕಿ ಆ ಪಿಸ್ತೂಲ್‍ನಲ್ಲಿ ಆಟವಾಡುವಾಗ ನಿಜವಾದ ಪಿಸ್ತೂಲ್ ಎಂದು ತಿಳಿಯದೇ ತನ್ನ ತಾಯಿಗೆ ಶೂಟ್ ಮಾಡಿದ್ದಾಳೆ.
Advertisement
ಭಾನುವಾರ ಬೆಳಗ್ಗೆ ಕಾಕೋಲಿ ತನ್ನ ಮನೆಯ ಆವರಣದಲ್ಲಿ ಆ ಪಿಸ್ತೂಲ್ ಅನ್ನು ನೋಡಿದ್ದರು. ನಂತರ ಅದು ಆಟವಾಡೋ ಪಿಸ್ತೂಲ್ ಎಂದು ತಿಳಿದು ತನ್ನ ಮಗಳಿಗೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಬಾಲಕಿ ಆ ಪಿಸ್ತೂಲ್‍ನಿಂದ ಆಟವಾಡುವಾಗ ಆಕಸ್ಮಿಕವಾಗಿ ತನ್ನ ತಾಯಿಯ ಬೆನ್ನಿಗೆ ಶೂಟ್ ಮಾಡಿದ್ದಾಳೆ. ತಕ್ಷಣ ಕಾಕೋಲಿ ಅವರನ್ನು ಆರಂಬಗ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಸದ್ಯ ಕಾಕೋಲಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಈ ಘಟನೆಗೆ ಸಂಬಂಧಿಸಿದಂತೆ ಬಾಲಕಿಯನ್ನು ವಶಕ್ಕೆ ಪಡೆದಿದ್ದೇವೆ. ಬಾಲಕಿ ಆಕಸ್ಮಿಕವಾಗಿ ಗುಂಡನ್ನು ಹಾರಿಸಿದ್ದಾಳೆ. ಆ ಗುಂಡು ರೂಮಿನಲ್ಲಿ ಕುಳಿತ್ತಿದ್ದ ಆಕೆಯ ತಾಯಿಯ ಬೆನ್ನಿಗೆ ಬಿದ್ದಿದೆ. ಸದ್ಯ ಬಾಲಕಿ ಶಾಕ್ ನಲ್ಲಿದ್ದು, ಏನು ಹೇಳುವ ಸ್ಥಿತಿಯಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
Advertisement
ಸದ್ಯ ಪೊಲೀಸರು ಆ ಪಿಸ್ತೂಲ್ ಮನೆಯ ಆವರಣದಲ್ಲಿ ಹೇಗೆ ಬಂತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.