ಬೆಂಗಳೂರು: ಖಾಸಗಿ ಬಸ್‍ನಲ್ಲಿ ಪ್ರಯಾಣಿಸುವ ವೇಳೆ ಮಲಗಿದ್ದ ಯುವತಿಗೆ ಕಿರುಕುಳ ಕೊಟ್ಟಿದ್ದ ಕ್ಲೀನರ್ ಗೆ ಥಳಿಸುವ ಬದಲು ಚಾಲಕನಿಗೆ ಥಳಿಸಿದ ಘಟನೆ ನಗರದಲ್ಲಿ ನಡೆದಿದೆ.
ಜನವರಿ 13ರಂದು ಶಿವಮೊಗ್ಗದಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಯುವತಿ ಆ ದಿನ ಎಕ್ಸಾಂ ಬರೆದು ಹಿಂತಿರುಗುತ್ತಿದ್ದಳು. ಈ ವೇಳೆ ಖಾಸಗಿ ಟ್ರಾವೆಲ್ಸ್ ನ ಬಸ್ಸಿನ ಕ್ಲೀನರ್ ತಡರಾತ್ರಿ ಮಲಗಿದ್ದ ಯುವತಿ ಪಕ್ಕದಲ್ಲಿ ಕುಳಿತು ಆಕೆಯ ಮೈ-ಕೈ ಮುಟ್ಟಿ ಕಿರುಕುಳ ನೀಡಿದ್ದಾನೆ. ಈ ಘಟನೆ ವೇಳೆ ಯುವತಿ ಎಚ್ಚರಗೊಂಡು ಜೋರಾಗಿ ಕಿರುಚಾಡಿಕೊಂಡಿದ್ದಾಳೆ. ಯುವತಿ ಕಿರುಚಿಕೊಳ್ಳುತ್ತಿದ್ದಂತೆ ಕ್ಲೀನರ್ ಅಲ್ಲಿಂದ ಓಡಿ ಹೋಗಿದ್ದಾನೆ.
- Advertisement
ಈ ಘಟನೆ ಬಳಿಕ ಯುವತಿ ತನ್ನ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಜನವರಿ 14ರ ರಾತ್ರಿ ವಿಜಯಲಕ್ಷ್ಮೀ ಟ್ರಾವೆಲ್ಸ್ ಬಸ್ ತಡೆದು ಗಲಾಟೆ ಮಾಡಿದ್ದಾರೆ. ಅಲ್ಲದೇ ಕ್ಲೀನರ್ ಹಿಡಿಯುವ ಬದಲು ಚಾಲಕ ಮಂಜುನಾಥ್ ಕಿರಕುಳ ನೀಡಿದ್ದಾನೆ ಎಂದು ತಿಳಿದು ಯುವತಿ ಕಡೆಯ 8 ಜನರ ತಂಡ ಚಾಲಕ ಮಂಜುನಾಥ್‍ನನ್ನು ನೆಲಕ್ಕೆ ಕೆಡವಿ ಹಾಕಿ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.
- Advertisement
ಕ್ಲೀನರ್ ಬಿಟ್ಟು ತನಗೆ ಹಲ್ಲೆ ಮಾಡಿದಕ್ಕೆ ಚಾಲಕ ಮಂಜುನಾಥ್ ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಮಂಜುನಾಥ್ ದೂರು ನೀಡುತ್ತಿದ್ದಂತೆ ಯುವತಿ ಕೂಡ ಕ್ಲೀನರ್ ವಿರುದ್ಧ ದೂರು ನೀಡಿದ್ದಾಳೆ. ಆರ್‍ಎಂಸಿ ಯಾರ್ಡ್ ಪೊಲೀಸರು ಎರಡು ಪ್ರಕರಣಗಳನ್ನು ತನಿಖೆ ನಡೆಸುತ್ತಿದ್ದು, ತಲೆಮರೆಸಿಕೊಂಡಿರುವ ಕಾಮುಕ ಕ್ಲೀನರ್ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv