ಹಾಸನ: ಕಾಲೇಜಿಗೆ ಡ್ರಾಪ್ ಕೊಡುವ ನೆಪದಲ್ಲಿ ಪರಿಚಯಸ್ಥ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ಹಾಸನದಲ್ಲಿ (Hassan) ನಡೆದಿದೆ.
ಪದವಿ ಓದುತ್ತಿರುವ ಆರೋಪಿ, ಬಾಲಕಿಗೆ ಡ್ರಾಪ್ ಕೊಡುವುದಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ವಾಪಸ್ ಕರೆದುಕೊಂಡು ಬರುವಾಗ ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಹೆದರಿದ ಬಾಲಕಿ ಬೈಕ್‌ನಿಂದ ಜಿಗಿದಿದ್ದಾಳೆ. ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ತ್ವಿಶಾ ಆತ್ಮಹತ್ಯೆ ಕೇಸ್: ಪತಿ, ಅತ್ತೆಗೆ 14 ದಿನ ನ್ಯಾಯಾಂಗ ಬಂಧನ
ಆರೋಪಿ ವಿದ್ಯಾಭ್ಯಾಸದ ಜೊತೆಗೆ ಪಾನಿಪುರಿ ಅಂಗಡಿ ನಡೆಸುತ್ತಿದ್ದ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗೆ ಸಾಥ್ ನೀಡಿರುವ ಇನ್ನಿಬ್ಬರು ಸ್ನೇಹಿತರನ್ನು ಪೊಲೀಸರು ಹುಡುಕುತ್ತಿದ್ದಾರೆ. ಈ ಸಂಬಂಧ ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆನೇಕಲ್| ಮಾಜಿ ಎಂಎಲ್‌ಸಿ ಕಿಡ್ನ್ಯಾಪ್ ಮಾಡಿ 3 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳು
