Connect with us

ಮಾಜಿ ಲವ್ವರ್ ಗೆ ಸೆಲ್ಫಿ ವಿಡಿಯೋ ಸೆಂಡ್ ಮಾಡಿ ನವ ವಧು ಆತ್ಮಹತ್ಯೆ!

ಮಾಜಿ ಲವ್ವರ್ ಗೆ ಸೆಲ್ಫಿ ವಿಡಿಯೋ ಸೆಂಡ್ ಮಾಡಿ ನವ ವಧು ಆತ್ಮಹತ್ಯೆ!

ಮುಂಬೈ: ಮದುವೆಗೆ ಇನ್ನು 10 ದಿನಗಳು ಇರುವಾಗ ಮಾಜಿ ಪ್ರಿಯಕರನಿಗೆ ಸೆಲ್ಫಿ ವಿಡಿಯೋ ಸೆಂಡ್ ಮಾಡಿ ನವವಧು ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಬಾಂದ್ರಾ ಜಿಲ್ಲೆಯಲ್ಲಿ ನಡೆದಿದೆ.

ನಿಶಾ ದೇವಿದಾಸ್ ಆತ್ಮಹತ್ಯೆಗೆ ಶರಣಾದ ನವ ವಧು. ಫೆಬ್ರವರಿ 4 ರಂದು ನಿಶಾ ಮದುವೆ ನಿಶ್ಚಯವಾಗಿತ್ತು. ಆದರೆ ಕ್ರಿಮಿನಾಶಕ ವಿಷ ಸೇವಿಸಿ ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಜಿಲ್ಲೆಯ ನಾಗ್ಪುರ ಸಮೀಪದ ರೋಹಿಣಿ ಗ್ರಾಮದಲ್ಲಿ ನಡೆದಿದೆ.

ಮಾಜಿ ಪ್ರಿಯಕರ ನಿಶಾಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದು, ಇದರಿಂದ ಮನನೊಂದು ಲೈವ್ ಆಗಿ ವಿಷವನ್ನು ಸೇವಿಸಿ ಕೊನೆಯದಾಗಿ ಮಾತನಾಡಿದ್ದಾಳೆ. ಬಳಿಕ ಆ ವಿಡಿಯೋವನ್ನು ಆತನಿಗೆ ಕಳುಹಿಸಿದ್ದಾಳೆ. ಕುಟುಂಬದ ಸದಸ್ಯರಿಗೆ ವಿಷ ಸೇವಿಸಿದ್ದ ವಿಚಾರ ತಿಳಿದು ತಕ್ಷಣ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ನನ್ನ ಸಹೋದರಿ ಮದುವೆ ಫೆಬ್ರವರಿ 4 ರಂದು ನಿಶ್ಚಯವಾಗಿದ್ದು, ಮದುವೆಯ ಸಿದ್ಧತೆಗಳು ನಡೆಯುತ್ತಿದ್ದವು. ನನ್ನ ಸಹೋದರಿ ಸಾವಿಗೆ ನಿಖಿಲ್ ಕಾರಣನಾಗಿದ್ದಾನೆ. ಆತ ನನ್ನ ಸಹೋದರಿಯನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು. ಇದರಿಂದ ಮನನೊಂದು ಕ್ರಿಮಿನಾಶಕ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾಳೆ. ಆದ್ದರಿಂದ ತಕ್ಷಣ ನಿಖಿಲ್‍ನನ್ನು ಬಂಧಿಸಿಬೇಕು ಎಂದು ನಿಶಾ ಸಹೋದರ ರವಿ ಕಾವ್ಲೇ ಹೇಳಿದ್ದಾರೆ.

ಈ ಘಟನೆ ಸಂಬಂಧ ಲಖಾಂದುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಪ್ರಕರಣವನ್ನು ಆತ್ಮಹತ್ಯೆ ಎಂದು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

 

Advertisement
Advertisement