ಮಂಡ್ಯ: ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಟ್ಯೂಷನ್‌ಗೆ ಹೋದ ಬಾಲಕಿಯನ್ನು ರೇಪ್ ಮಾಡಿ, ಕೊಲೆ ಮಾಡಿದ ಪ್ರಕರಣ ಜರುಗಿದ ಬೆನ್ನಲ್ಲೆ ಶಿಕ್ಷಣ ಇಲಾಖೆ ಅಲರ್ಟ್ ಆಗಿದೆ. ಅನಧಿಕೃತ ಟ್ಯೂಷನ್ ಸೆಂಟರ್‌ಗಳ (Tuition Centre) ಮೇಲೆ ಮಂಡ್ಯ ಶಿಕ್ಷಣ ಇಲಾಖೆ (Mandya Education Department) ಹದ್ದಿನ ಕಣ್ಣು ಇಟ್ಟಿದೆ.
ಅನುಮತಿ ಪಡೆಯದೆ ಟ್ಯೂಷನ್ ಸೆಂಟರ್‌ಗಳನ್ನು ನಡೆಸಿದರೆ ಕೇಸ್‌ಗಳನ್ನು ದಾಖಲು ಮಾಡುವುದಾಗಿ ಡಿಡಿಪಿಐ ಜವರೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮಳವಳ್ಳಿ ಪಟ್ಟಣದಲ್ಲಿ ಟ್ಯೂಷನ್ ಸಂಸ್ಥೆಯ ಮೇಲ್ವಿಚಾರಕನಿಂದಲೇ ಪೈಶಾಚಿಕ ಕೃತ್ಯ ಜರುಗಿದ್ದು, ಈ ಕೃತ್ಯದ ಬಳಿಕ ತಂದೆ-ತಾಯಿಗಳು ಮಕ್ಕಳನ್ನು ಟ್ಯೂಷನ್‌ಗೆ ಕಳುಹಿಸಲು ಹಿಂದೆ ಮುಂದೆ ನೋಡುವ ಸನ್ನಿವೇಶ ಎದುರಾಗಿದೆ. ಇದೀಗ ಘಟನೆ ಬಳಿಕ ಹೈ ಅಲರ್ಟ್ ಆಗಿರುವ ಶಿಕ್ಷಣ ಇಲಾಖೆ ಮಂಡ್ಯ ಜಿಲ್ಲೆಯಾದ್ಯಂತ ಅಕ್ರಮ ಟ್ಯೂಷನ್ ಸೆಂಟರ್ ಪತ್ತೆಗೆ ಸುತ್ತೋಲೆ ಹೊರಡಿಸಿದೆ.
ಅನಧಿಕೃತ ಟ್ಯೂಷನ್ ಕಂಡು ಬಂದರೆ ತಕ್ಷಣವೇ ಕ್ರಮ ವಹಿಸುವುದರ ಜೊತೆಗೆ, ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಿಕ್ಷಕರು ಟ್ಯೂಷನ್ ಮಾಡಿದ್ರೆ ಶಿಸ್ತುಕ್ರಮ ವಹಿಸಲಾಗುವುದು ಎಂದು ಡಿಡಿಪಿಐ ಜವರೇಗೌಡ ಶಿಕ್ಷಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಇದನ್ನೂ ಓದಿ: ರೇಪ್ ಮಾಡಿ ಬಾಲಕಿಯನ್ನು ಹತ್ಯೆಗೈದ – ಕಾಮುಕ ಕಾಂತರಾಜು ಗಲ್ಲಿಗೆ ಆಗ್ರಹ
ಟ್ಯೂಷನ್ ಸೆಂಟರ್ ನಡೆಸುವವರು ಸರ್ಕಾರದ ಗೈಡ್‌ಲೈನ್‌ಗಳನ್ನು ಪಾಲಿಸುವುದರ ಜೊತೆಗೆ ಮೊದಲು ಶಿಕ್ಷಣ ಇಲಾಖೆಯಿಂದ ಲೈಸೆನ್ಸ್ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಕೇಸ್ ದಾಖಲು ಮಾಡುವುದಾಗಿಯು ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಮಳವಳ್ಳಿ ಬಾಲಕಿ ಕುಟಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ