ಪಾಟ್ನಾ: ಕಾಪಿ ಚೀಟಿಯನ್ನು ನೋಡಿ ಲವ್ ಲೆಟರ್ ಎಂದು ಭಾವಿಸಿದ ವಿದ್ಯಾರ್ಥಿನಿಯೊಬ್ಬಳ (Student) ಸಹೋದರರು ಸೇರಿ ಬಾಲಕನನ್ನು ಹತ್ಯೆ ಮಾಡಿದ ಘಟನೆ ಬಿಹಾರದ ಭೋಜ್‍ಪುರ (Bhojpur) ಜಿಲ್ಲೆಯಲ್ಲಿ ನಡೆದಿದೆ.
ದಯಾ ಕುಮಾರ್ (12) ಮೃತ ಬಾಲಕ. ದಯಾಕುಮಾರ್ 5ನೇ ತರಗತಿಯನ್ನು ಓದುತ್ತಿದ್ದ. ಆಕೆಯ ಸಹೋದರಿ 6ನೇ ತರಗತಿಯಲ್ಲಿ ಓದುತ್ತಿದ್ದಳು. ಪರೀಕ್ಷೆ ಪ್ರಾರಂಭವಾಗುತ್ತಿದ್ದಂತೆ ದಯಾಕುಮಾರ್ ತನ್ನ ಸಹೋದರಿಗೆ ಸಹಾಯ ಮಾಡುವ ಹಿನ್ನೆಲೆಯಲ್ಲಿ ಕಾಪಿ ಚೀಟಿಯನ್ನು ಆಕೆಯತ್ತ ಎಸೆದಿದ್ದಾನೆ. ದುರಾದೃಷ್ಟವಶಾತ್ ಆ ಕಾಪಿ ಚೀಟಿಯು ಬೇರೆ ವಿದ್ಯಾರ್ಥಿನಿಯ ಡೆಸ್ಕ್‌ನ ಹತ್ತಿರ ಬಿದ್ದಿದೆ. ಇದನ್ನು ನೋಡಿದ ಆ ವಿದ್ಯಾರ್ಥಿನಿ ಚೀಟಿಯನ್ನು ನೋಡಿ ಪ್ರೇಮ ಪತ್ರ (Love Letter) ಎಂದು ಭಾವಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆ ತನ್ನ ಸಹೋದರರಿಗೆ ತಿಳಿಸಿದ್ದಾಳೆ.
ಘಟನೆಗೆ ಸಂಬಂಧಿಸಿ ವಿದ್ಯಾರ್ಥಿನಿಯ ಸಹೋದರರು ಸ್ಥಳಕ್ಕಾಗಮಿಸಿ ದಯಾಕುಮಾರ್‌ನ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿ ಆತನನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಅದಾದ ನಾಲ್ಕು ದಿನಗಳ ನಂತರ ದಯಾಕುಮಾರ್ ದೇಹದ ಭಾಗಗಳು ರೈಲ್ವೆ ಹಳಿ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇದನ್ನೂ ಓದಿ:23ನೇ ಮಹಡಿಯಿಂದ ಬಿದ್ದು ಮುಂಬೈನ ಖ್ಯಾತ ಬಿಲ್ಡರ್ ಸಾವು
ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಿಸಿ ನಾಲ್ವರು ಬಾಲಾಪರಾಧಿಗಳು ಸೇರಿದಂತೆ ವಿದ್ಯಾರ್ಥಿನಿಯ ಕುಟುಂಬದ ಸದಸ್ಯರನ್ನು ಬಂಧಿಸಿದ್ದಾರೆ (Arrest). ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಮುಂದಾದ ಸರ್ಕಾರ