ಬೆಂಗಳೂರು: ಸಿಲಿಕಾನ್ ಸಿಟಿ ಜನರು ಹೊಸ ವರ್ಷವನ್ನು ತಮ್ಮದೇ ಶೈಲಿಯಲ್ಲಿ ಆಚರಿಸಿಕೊಂಡರು. ಯುವ ಜನತೆಯಂತೂ ಕುಣಿದು ಕುಪ್ಪಳಿಸಿ, ಪಟಾಕಿ ಹೊಡೆದು ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ನಗರದ ಬಹುತೇಕ ಹೋಟೆಲ್, ರೆಸ್ಟೋರೆಂಟ್ ಹೊಸ ವರ್ಷಕ್ಕಾಗಿ ಸಿದ್ಧತೆಗೊಳ್ಳುವುದರ ಜೊತೆಗೆ ಹಲವು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.
ಬ್ರಿಗೇಡ್ ರಸ್ತೆಯಲ್ಲಿ ಸೇರಿದ್ದ ಜನರನ್ನು ಅಲ್ಲಿಯೇ ಸಂಗೀತವೇ ಹೆಜ್ಜೆ ಹಾಕುವಂತೆ ಮಾಡುತ್ತಿತ್ತು. ಹೋಟೆಲೊಂದರಲ್ಲಿ ಹೊಸ ವರ್ಷಚಾರಣೆಯಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ನೂರಾರು ಜೋಡಿಗಳು ಕುಣಿದು ಕುಪ್ಪಳಿಸುತ್ತಿದ್ದಾಗ ಚೆಲುವೆಯೊಬ್ಬಳು ತನ್ನ ಇನಿಯನೊಂದಿಗೆ ಲಿಪ್ ಲಾಕ್ ಮಾಡಿಕೊಳ್ಳುವ ಮೂಲಕ ಹೊಸ ವರ್ಷದ ಶುಭಕೋರಿದಳು. ಈ ಕಾರ್ಯಕ್ರಮದಲ್ಲಿ ಭಾಗಿಯದ್ದವರತ್ತ ಸುಂದರಿ ಫ್ಲೈಯಿಂಗ್ ಕಿಸ್ ಹರಿಬಿಟ್ಟಳು.
ಇದೇ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಜನರು ಯುವತಿಯನ್ನು ನೋಡಿ ಒಂದು ಕ್ಷಣ ಗಲಿಬಿಲಿಯಾದರು. ಖುದ್ದು ಗೆಳತಿಯಿಂದ ಕಿಸ್ ಪಡೆದ ಯುವಕನೇ ಶಾಕ್ ಆಗಿದ್ದ. ಒಟ್ಟಿನಲ್ಲಿಯೇ ಯುವ ಜೋಡಿಗಳು ಕುಣಿದು ಎಂಜಾಯ್ ಮಾಡಿದ್ದಂತು ಸತ್ಯ.
ವಿಶ್ವದಾದ್ಯಂತ ಹೊಸ ವರ್ಷವನ್ನು ಎಲ್ಲರು ಆತ್ಮೀಯವಾಗಿ ಬರಮಾಡಿಕೊಂಡರು. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಯುವಕ-ಯುವತಿಯರು ಕುಣಿದು, ಕುಪ್ಪಳಿಸಿ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv