Connect with us

ಬಾಯ್‍ಫ್ರೆಂಡ್ ಜೊತೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದು ಅಪ್ಪನನ್ನೇ ಕೊಂದ್ಳು 19 ವರ್ಷದ ಮಗಳು!

ಬಾಯ್‍ಫ್ರೆಂಡ್ ಜೊತೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದು ಅಪ್ಪನನ್ನೇ ಕೊಂದ್ಳು 19 ವರ್ಷದ ಮಗಳು!

ನೊಯ್ಡಾ: ವ್ಯಕ್ತಿಯೊಬ್ಬರನ್ನು ಸ್ವತಃ ಅವರ ಮಗಳು ಹಾಗೂ ಬಾಯ್‍ಫ್ರೆಂಡ್ ಸೇರಿ ಕೊಲೆ ಮಾಡಿರುವ ಘಟನೆ ನೊಯ್ಡಾದ ಅಟ್ಟಾ ಗ್ರಾಮದಲ್ಲಿ ನೆಡೆದಿದೆ ಎಂದು ಸೋಮವಾರದಂದು ಪೊಲೀಸರು ತಿಳಿಸಿದ್ದಾರೆ.

ವಿಶ್ವನಾಥ್ ಸಾಹು ಮಗಳಿಂದಲೇ ಕೊಲೆಯಾದ ವ್ಯಕ್ತಿ. ಭಾನುವಾರ ಮುಂಜಾನೆ ಸುಮಾರು 4 ಗಂಟೆ ವೇಳೆಯಲ್ಲಿ ವಿಶ್ವನಾಥ್ ಯಾರೋ ಅಪರಿಚಿತರ ಧ್ವನಿ ಕೇಳಿ ನಿದ್ದೆಯಿಂದ ಎದ್ದಿದ್ದರು. ನಂತರ ಮಗಳಾದ 19 ವರ್ಷದ ಪೂಜಾಳ ರೂಮಿಗೆ ಹೋಗಿ ನೋಡಿದಾಗ ಶಾಕ್ ಆಗಿದ್ದರು. ಪೂಜಾ ತನ್ನ ಬಾಯ್‍ಫ್ರೆಂಡ್ ಧರ್ಮೇಂದ್ರ ಜೊತೆ ಸರಸವಾಡ್ತಿದ್ದನ್ನು ನೋಡಿದ ವಿಶ್ವನಾಥ್, ಇಬ್ಬರಿಗೂ ಬೈದಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಬೈಗುಳದಿಂದ ಕೋಪಗೊಂಡ ಪೂಜಾ ಹಾಗೂ ಧರ್ಮೇಂದ್ರ ವಿಶ್ವನಾಥ್ ಅವರನ್ನ ತೀವ್ರವಾಗಿ ಥಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ ಮಗಳು ಹಾಗೂ ಪ್ರೇಮಿ ಥಳಿಸಿದಾಗ ವಿಶ್ವನಾಥ್ ಮೂರನೇ ಮಹಡಿಯಿಂದ ಕೆಳಗೆ ಬಿದ್ದಿದ್ದರು ಎಂದು ವರದಿಯಾಗಿದೆ.

ಗಂಭೀರ ಸ್ಥಿತಿಯಲ್ಲಿದ್ದ ವಿಶ್ವನಾಥ್ ಅವರನ್ನು ಕೂಡಲೇ ನೊಯ್ಡಾದ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿಂದ ದೆಹಲಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಸೋಮವಾರದಂದು ಚಿಕಿತ್ಸೆ ವೇಳೆ ವಿಶ್ವನಾಥ್ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ವಿಶ್ವನಾಥ್ ಪತ್ನಿ ಗಾಯತ್ರಿ ನೀಡಿದ ದೂರಿನನ್ವಯ ಪೂಜಾ ಹಾಗೂ ಧಮೇಂದ್ರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಪೂಜಾಳನ್ನು ಬಂಧಿಸಲಾಗಿದೆ. ಆದ್ರೆ ಆಕೆಯ ಬಾಯ್‍ಫ್ರೆಂಡ್ ಧರ್ಮೇಂದ್ರ ತಲೆಮರೆಸಿಕೊಂಡಿದ್ದಾನೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement
Advertisement