ಹೈದರಾಬಾದ್: ಬಾಹುಬಲಿ ಸಿನಿಮಾದ ಬಳಿಕ ನಟ ಪ್ರಭಾಸ್ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ದಕ್ಷಿಣ ಭಾರತದಲ್ಲಿ ಮಾತ್ರ ಅಭಿಮಾನಿಗಳನ್ನು ಹೊಂದಿದ್ದ ಪ್ರಭಾಸ್, ಬಾಹುಬಲಿ ಸಿನಿಮಾದ ಬಳಿಕ ದೇಶಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಪ್ರಭಾಸ್ ಗಳಿಸಿಕೊಂಡಿದ್ದಾರೆ.
ಇದಕ್ಕೆ ನಿದರ್ಶನ ಎಂಬಂತೆ ಮಹಿಳಾ ಅಭಿಮಾನಿಯೊಬ್ಬರು ತಮ್ಮ ಬೆನ್ನಿನ ಮೇಲೆ ಪ್ರಭಾಸ್ ಚಿತ್ರವನ್ನು ಬಿಡಿಸಿಕೊಂಡಿದ್ದಾರೆ. ಪ್ರಭಾಸ್ ಹುಟ್ಟುಹಬ್ಬದಂದು ಮಹಿಳಾಭಿಮಾನಿ ಈ ಚಿತ್ರವನ್ನು ತೆಗೆಸಿಕೊಂಡಿದ್ದು, ತಮ್ಮ ನೆಚ್ಚಿನ ನಟನಿಗೆ ಎಲ್ಲರಿಗಿಂತ ವಿಭಿನ್ನ ಬರ್ತ್ ಡೇ ವಿಶ್ ಮಾಡಿದ್ದಾರೆ. ಮಹಿಳಾಭಿಮಾನಿ ಅಹಮದಾಬಾದ್ ಕ್ರೈಂ ಬ್ರಾಂಚ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರಭಾಸ್ ಹುಟ್ಟು ಹಬ್ಬದಂದು ಕಚೇರಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇತ್ತೀಚೆಗೆ ಸ್ಯಾಂಡಲ್‍ವುಡ್ ನಟಿ ಹರ್ಷಿಕಾ ಪೂಣಚ್ಚ ತಮ್ಮ `ಚಿಟ್ಟೆ’ ಸಿನಿಮಾಗಾಗಿ ತಮ್ಮ ಬೆನ್ನಿನ ಮೇಲೆ ಕಲರ್‍ಫುಲ್ ಚಿಟ್ಟೆಯನ್ನು ಹಾಕಿಸಿಕೊಂಡು ಸುದ್ದಿಯಾಗಿದ್ದರು. ಸ್ಯಾಂಡಲ್‍ವುಡ್ ನಟಿ ಶ್ವೇತಾ ಶ್ರೀವಾತ್ಸವ್ ತಮ್ಮ ಹೊಟ್ಟೆಯ ಮೇಲೆ ಮುದ್ದಾದ ಮಗುವಿನ ಚಿತ್ರವನ್ನು ಹಾಕಿಸಿಕೊಂಡಿದ್ದರು.