ಕೋಲಾರ: ಹಳೆಯ ಮನೆ ಕುಸಿದು (House Collapse) ಬಿದ್ದು ಬಾಲಕಿ ಸಾವನ್ನಪ್ಪಿದ ಘಟನೆ ಮುಳಬಾಗಿಲು (Mulbagal) ನಗರದಲ್ಲಿ ನಡೆದಿದೆ. ಈ ಅವಘಡದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ಬಾಲಕಿಯನ್ನು ವಹಿನೂರ್ (15) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸುಹೇಲ್, ಕೌಸರ್, ಅಯಾಜ್ ಮತ್ತು ಅಬ್ಜರ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಕೋಲಾರದ ಖಾಸಗಿ ಆಸ್ಪತ್ರೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ನಾಗಾಲ್ಯಾಂಡ್ ಮೂಲದ ಯುವತಿ ಆತ್ಮಹತ್ಯೆ
ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಎರಡು ಕುಟುಂಬದ ಮಧ್ಯೆ ಆಸ್ತಿ ವೈಷಮ್ಯ – ಅಪ್ರಾಪ್ತನಿಂದ ವ್ಯಕ್ತಿಯ ಕೊಲೆ

