ಚಿಕ್ಕಬಳ್ಳಾಪುರ: ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಆರು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬೀಡಿಕೆರೆ ಗ್ರಾಮದಲ್ಲಿ ನಡೆದಿದೆ.
Advertisement
ಗ್ರಾಮದ ಸವಿತಾ ಹಾಗೂ ಮುನಿರಾಜು ದಂಪತಿಯ ಪುತ್ರಿ ಚಾರುಲತ(6) ಮೃತ ಬಾಲಕಿ. ಕಳೆದ ಒಂದು ವಾರದಿಂದ ತೀವ್ರ ತರವಾದ ಜ್ವರದಿಂದ ಬಳಲುತ್ತಿದ್ದ ಚಾರು ಲತಾಳನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಮರಾಠಿ ಬೋರ್ಡ್ ಹಾಕಿ ಇಲ್ಲದಿದ್ದರೆ ಕನ್ನಡ ನಾಮಫಲಕ ಇರಲ್ಲ ಎಂದು MES ಪುಂಡಾಟ – ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸರು
Advertisement
Advertisement
ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದು, ಮೃತಳ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಮಳೆಗಾಲದ ಸಂದರ್ಭದಲ್ಲಿ ನಿಂತ ನೀರಲ್ಲಿ ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ಸೊಳ್ಳೆಗಳು ಹೆಚ್ಚಾಗಲಿದ್ದು, ಮನೆಯ ಸುತ್ತಮುತ್ತಲಿನ ವಾತಾವರಣ ಸ್ವಚ್ಚವಾಗಿರಿಸಕೊಂಡು ಮುಂಜಾಗ್ರತಾ ಕ್ರಮ ವಹಿಸಬೇಕಿದೆ. ಇದನ್ನೂ ಓದಿ: ಸತೀಶ್ ಪಾಟೀಲ್ ಹತ್ಯೆಗೆ ಪೊಲೀಸರ ವೈಫಲ್ಯವೇ ಕಾರಣ: ಸತೀಶ್ ಜಾರಕಿಹೊಳಿ