ಹಾಡಹಗಲೇ ಲೈಂಗಿಕ ಕಿರುಕುಳ – ಕಾಮುಕರ ಚೆಲ್ಲಾಟಕ್ಕೆ ಬಾಲಕಿ ಬಲಿ

Public TV
1 Min Read
YDG DEATH

ಯಾದಗಿರಿ: ಕಾಮುಕರ ಕಾಟದಿಂದ ಬೇಸತ್ತ ಬಾಲಕಿ ಮರ್ಯಾದೆಗೆ ಅಂಜಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ನಡೆದಿದೆ.

ಸುಪ್ರೀಯಾ ಮೃತ ದುರ್ದೈವಿ. ಇಬ್ಬರು ಕಾಮುಕರು ಲೈಂಗಿಕ ಕಿರುಕುಳ ನೀಡಿದ್ದರಿಂದ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

YGR 24 03 18 TORCHER SUICIDE PKG NIGAPPA PHOTO

ನಡೆದಿದ್ದೇನು?
ಮಾರ್ಚ್ 19 ರಂದು ಬಾಲಕಿ ಬೆಳಗ್ಗೆ ಬಟ್ಟೆ ತೊಳೆದು ಮನೆಗೆ ವಾಪಸ್ ಬರುವಾಗ ಗ್ರಾಮದ ಇಬ್ಬರು ಪುಂಡ ಯುವಕರು ಬಾಲಕಿಗೆ ಮೌನೇಶ ಹಾಗೂ ನಿಂಗಪ್ಪ ಎಂಬ ಇಬ್ಬರು ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ಕಾಮುಕರ ಕಾಟಕ್ಕೆ ಬೇಸತ್ತು ಬಾಲಕಿ ಮನೆಗೆ ಬಂದು ಮೈ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಕೂಡಲೇ ಸುಪ್ರೀಯಾಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕಿ ದೇಹ 90% ರಷ್ಟು ಬೆಂಕಿ ತಗುಲಿತ್ತು. ಪರಿಣಾಮ ಐದು ದಿನಗಳ ಕಾಲ ಬಾಲಕಿ ಚಿಕಿತ್ಸೆ ಪಡೆದಿದ್ದಾಳೆ. ಆದರೆ ಶನಿವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಬಾಲಕಿ ಮೃತಪಟ್ಟಿರುವ ಸುದ್ದಿ ತಿಳಿದ ತಕ್ಷಣ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳು ಶನಿವಾರ ಕೆಲಕಾಲ ತಿಂಥಣಿ ಗ್ರಾಮದ ರಾಜ್ಯ ಹೇದ್ದಾರಿ ಮೇಲೆ ಮೃತ ಸುಪ್ರೀಯಾಳ ಶವವಿಟ್ಟು ಪ್ರತಿಭಟನೆ ಮಾಡಿದ್ದಾರೆ.

YDG

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ನಿಂಗಪ್ಪ ಹಾಗೂ ಮೌನೇಶನನ್ನು ಸುರಪುರ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಕಳೆದುಕೊಂಡ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿದೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *