ಬೆಂಗಳೂರು: ಜೆಪಿ ನಗರದ ಡೆಂಟಲ್ ಆಸ್ಪತ್ರೆಯೊಂದರಲ್ಲಿ ಹಲ್ಲು ನೋವಿಗೆ ಚಿಕಿತ್ಸೆ ತೆಗೆದುಕೊಂಡ ನಟಿಯ ಮುಖ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಂಪೂರ್ಣ ಚೇಂಚ್ ಆಗಿರುವ ಘಟನೆ ಬೆಳಗಿಗೆ ಬಂದಿದೆ.
Advertisement
ಹಲ್ಲು ನೋವಿನಿಂದ ಬಳಲುತ್ತಿದ್ದ ನಟಿ ಬೆಂಗಳೂರಿನ ಜೆಪಿ ನಗರದ ಡೆಂಟಲ್ ಆಸ್ಪತ್ರೆಯೊಂದರಲ್ಲಿ ಕಳೆದ 28 ದಿನಗಳ ಹಿಂದೆ ಚಿಕಿತ್ಸೆ ತೆಗೆದುಕೊಂಡಿದ್ದರು. ಆ ಬಳಿಕ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನಟಿಯ ಮುಖ ಸಂಪೂರ್ಣ ಊದಿಕೊಂಡು ರೂಪವೇ ಬದಲಾಗಿದೆ. ಇದೀಗ ಕಳೆದ ಇಪ್ಪತ್ತು ದಿನದಿಂದ ಮನೆಯಿಂದ ಹೊರಬಾರದೇ ನಟಿ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಹೊಟ್ಟೆಪಾಡಿಗಾಗಿ ಬೀದಿ ವ್ಯಾಪಾರಿಯಾದ ಅಫ್ಘಾನಿಸ್ತಾನದ ಫೇಮಸ್ ಟಿವಿ ಆ್ಯಂಕರ್
Advertisement
ಈ ಬಗ್ಗೆ ತಜ್ಞ ವೈದ್ಯರ ಬಳಿ ವಿಚಾರಿಸಿದಾಗ ಡೆಂಟಲ್ ಆಸ್ಪತ್ರೆ ವೈದ್ಯರ ಯಡವಟ್ಟು ಗೊತ್ತಾಗಿದೆ. ಚಿಕಿತ್ಸೆ ವೇಳೆ ಅನಸ್ತೇಷಿಯಾ ಬದಲು ಬೇರೊಂದು ಇಂಜೆಕ್ಷನ್ ಕೊಟ್ಟಿರೋದು ಬೆಳಕಿಗೆ ಬಂದಿದೆ. ಬಳಿಕ ನಟಿ ಆಸ್ಪತ್ರೆಯ ಆಡಳಿತ ಮಂಡಳಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಇತ್ತ ಚಿಕಿತ್ಸೆ ನೀಡಿದ ವೈದ್ಯರು ನಿರ್ಲಕ್ಷ್ಯ ಮುಂದುವರಿಸಿದ್ದು ನಟಿ ಕಂಗಾಲಾಗಿದ್ದಾರೆ. ಇಷ್ಟಲ್ಲ ಎಡವಟ್ಟುಗಳಾದರೂ ಕ್ರಮ ಕೈಗೊಳ್ಳದ ಆಡಳಿತ ಮಂಡಳಿ ವಿರುದ್ಧ ನಟಿ ಮತ್ತು ಸಂಬಂಧಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬರ್ತ್‍ಡೇ ಪಾರ್ಟಿ ಮುಗಿಸಿ ಮನೆಗೆ ಬಂದ ಯುವತಿ ಮೇಲೆ ಸ್ನೇಹಿತನಿಂದಲೇ ಅತ್ಯಾಚಾರ