ಬೀಜಿಂಗ್: ಕಟ್ಟಡದ ನಾಲ್ಕನೇ ಮಹಡಿಯ ಕಿಟಕಿಯಲ್ಲಿ ನೇತಾಡುತ್ತಿದ್ದ ಬಾಲಕಿಯನ್ನ ನೆರೆಮನೆಯವರೊಬ್ಬರು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ರಕ್ಷಿಸಿರೋ ಘಟನೆ ಚೀನಾದಲ್ಲಿ ನಡೆದಿದೆ.
ಚೀನಾದ ಕ್ಸಿಯೋಗಾನ್ ನಗರದಲ್ಲಿ ಕಳೆದ ವಾರ ಈ ಘಟನೆ ನಡೆದಿದೆ. ಬಾಲಕಿಯ ಕತ್ತು ಕಿಟಕಿಯ ಕಂಬಿಗಳ ಮಧ್ಯೆ ಸಿಲುಕಿಕೊಂಡ ನೇತಾಡುತ್ತಿದ್ದಳು. ಘಟನೆ ನಡೆದಾಗ ಬಾಲಕಿಯ ತಾಯಿ ಏನೋ ತರಲೆಂದು ಅಂಗಡಿಗೆ ಹೋಗಿದ್ದರು. ನೆರೆಹೊರೆಯವರು ಅಪಾರ್ಟ್ಮೆಂಟ್ ಡೋರ್ ಮುರಿಯಲು ತಯಾರಾಗಿದ್ರು. ಆದ್ರೆ ಅಷ್ಟರಲ್ಲಿ ಪಕ್ಕದಮನೆಯ ಚೆನ್ ಫಾಂಗ್ಯಾಂಗ್ ಕಿರುಚಾಟ ಕೇಳಿ ಹೊರಗಡೆ ಬಂದ್ರು.
Advertisement
Advertisement
ಕಟ್ಟಡದ ಮೂರನೇ ಮಹಡಿಯ ಕಿಟಕಿಯಿಂದ ಮೇಲೆ ಹತ್ತಿ ಬಾಲಕಿಯನ್ನ ಹಿಡಿದುಕೊಂಡ್ರು. ಸ್ಥಳೀಯರು ಗಾಬರಿಯಿಂದ ನೋಡುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವವರೆಗೂ ಸುಮಾರು ಅರ್ಧ ಗಂಟೆ ಕಾಲ ಮಗುವನ್ನ ಅದೇ ಸ್ಥಿತಿಯಲ್ಲಿ ಹಿಡಿದುಕೊಂಡಿದ್ರು.
Advertisement
Advertisement
ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಕಂಬಿಗಳನ್ನ ಕಟ್ ಮಾಡಿ ಇಬ್ಬರನ್ನೂ ಮೇಲಕ್ಕೆ ಎಳೆದುಕೊಂಡು ರಕ್ಷಣೆ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನಿಡಿರೋ ಫಾಂಗ್ಯಾಂಗ್, ಅಂತಹ ಸಂದರ್ಭದಲ್ಲಿ ಯಾರೇ ಆಗಿದ್ರು ಸಹಾಯ ಮಾಡುತ್ತಿದ್ರು ಎನಿಸುತ್ತದೆ ಎಂದಿದ್ದಾರೆ.