ಮಂಡ್ಯ: ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆಯುತ್ತಿದ್ದು, ವರ್ಷದಿಂದ ಪರೀಕ್ಷೆಗೆ ಸಿದ್ಧವಾಗಿದ್ದ ವಿದ್ಯಾರ್ಥಿನಿಯೊಬ್ಬಳು ತಂದೆಯನ್ನು ಕಳೆದುಕೊಂಡ ದುಃಖದಲ್ಲೇ ಪರೀಕ್ಷೆ ಬರೆದು ಮುಗಿಸಿದ್ದಾಳೆ.
ಇಂದು ಎಸ್‍ಎಸ್‍ಎಲ್‍ಸಿ ವಿಜ್ಞಾನ ಪರೀಕ್ಷೆ ನಿಗದಿಯಾಗಿತ್ತು, ಆದರೆ ಪರೀಕ್ಷೆಗೆ ಸಿದ್ಧವಾಗಿದ್ದ ಆ ವಿದ್ಯಾರ್ಥಿನಿಗೆ ತಂದೆಯ ಸಾವು ತೀವ್ರ ನೋವನ್ನು ಉಂಟು ಮಾಡಿತ್ತು. ಆದರೂ ತಂದೆಯ ಸಾವಿನ ದುಃಖದಲ್ಲೇ ಪರೀಕ್ಷೆ ಬರೆದು ಮುಗಿಸಿದ್ದಾಳೆ.
Advertisement
Advertisement
ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದ ತ್ಯಾಗರಾಜು (52) ಅವರಿಗೆ ಇಂದು ಬೆಳಗ್ಗೆ ಲಘು ಹೃದಯದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವೇಳೆ ಪರೀಕ್ಷೆ ಬರೆಯಲು ಸಿದ್ಧವಾಗಿದ್ದ ತ್ಯಾಗರಾಜು ಮಗಳು ವರ್ಷಿಣಿ ನಾನು ಪರೀಕ್ಷೆಗೆ ತೆರಳುವುದಿಲ್ಲ ಎಂದು ಹೇಳಿದ್ದಳು. ಆದರೆ ಈ ವೇಳೆ ತಂದೆಯೇ ಮಗಳಿಗೆ ಧೈರ್ಯ ಹೇಳಿ ಕಳುಹಿಸಿದ್ದರು. ಆದರೆ ತ್ಯಾಗರಾಜು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದರು. ಈ ವೇಳೆ ತಂದೆ ಸಾವಿನ ಸುದ್ದಿ ಮನೆಗೆ ತಲುಪಿತ್ತು. ಆದರೆ ತಂದೆಯ ಅಗಲಿಕೆಯ ನಡುವೆಯೇ ಮಗಳು ಪರೀಕ್ಷೆ ಬರೆದಿದ್ದಾಳೆ.
Advertisement
ಪರೀಕ್ಷೆ ಮುಗಿದ ಬಳಿಕ ಕೊಠಡಿಯಿಂದ ವರ್ಷಿಣಿ ಕಣ್ಣಿರಿಡುತ್ತಾ ಹೊರಬಂದಿದ್ದಾಳೆ. ಈ ದೃಶ್ಯವನ್ನು ನೋಡಿ ಸ್ಥಳದಲ್ಲಿದ್ದವರ ಕಣ್ಣಿನಿಂದಲೂ ನೀರು ಜಿನಿಗಿತ್ತು. ತ್ಯಾಗರಾಜು ಆಸೆಯಂತೆ ಪರೀಕ್ಷೆ ಬರೆಯುವ ಮೂಲಕ ತಂದೆಗೆ ನೀಡಿದ್ದ ಮಾತನ್ನು ಮಗಳು ಪೂರ್ಣಗೊಳಿಸಿದ್ದಾಳೆ.