ಮಡಿಕೇರಿ: ಪರೀಕ್ಷೆಗೆ ಹೆದರಿಕೊಂಡು 14 ವರ್ಷದ ಬಾಲಕಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಹೊಸಕೇರಿಯಲ್ಲಿ ನಡೆದಿದೆ.
ಜಸ್ಮಿತಾ(14) ಮೃತ ದುರ್ದೈವಿ. ಜಸ್ಮಿತಾ ಸೋಮವಾರ ಗಣಿತ ಪರೀಕ್ಷೆ ಬರೆದಿದ್ದಳು. ಪರೀಕ್ಷೆ ಬರೆದು ಬಳಿಕ ಮನೆಗೆ ಬಂದಾಗ ಡೆತ್ ನೋಟ್ ಬರೆದಿದ್ದಾಳೆ. ನಂತರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Advertisement
Advertisement
ಡೆತ್‍ನೋಟ್‍ನಲ್ಲಿ ಏನಿದೆ?
ಅಪ್ಪ-ಅಮ್ಮ ನೀವು ನನ್ನ ಚಂದ ಓದಿಸಬೇಕು ಅಂತ ಇದ್ದೀರಿ. ಆದರೆ ನನಗೆ ಓದಬೇಕು ಅಂತ ಇತ್ತು. ಆದರೆ ನಾನು ಯಾವಾಗಾಲೂ ಆಟವಾಡುತ್ತಿದೆ. ನನಗೆ ಅಮ್ಯನ ಮದುವೆ ನೋಡಬೇಕು ಅಂತ ಆಸೆ ಇತ್ತು. ಆದರೆ ನಾನು ಇವತ್ತು ದೊಡ್ಡ ತಪ್ಪು ಮಾಡಿದೆ. ಎಲ್ಲಿಯಾದರೂ ಹೋಗಬೇಕೆಂದು ತಿರ್ಮಾನ ಮಾಡಿದೆ. ನೀವು ನನ್ನ ಚಂದ ಬೆಳೆಸಿದ್ದೀರಿ. ಒಳ್ಳೆಯ ವಿದ್ಯಾಭ್ಯಾಸ ಮಾಡಿಸಿದ್ದೀರಿ. ಆದರೆ ನನಗೆ ಓದುವುದಕ್ಕೆ ಆಗಲಿಲ್ಲ.
Advertisement
Advertisement
ಅಮ್ಮ- ಅಪ್ಪ ನೀವು ಎಂದರೆ ನನಗೆ ಪ್ರಾಣ. ನನಗೆ ಎಲ್ಲರನ್ನು ಇಷ್ಟಪಡುತ್ತೇನೆ. ನಾನು ನಿಮಗೆ ತುಂಬಾ ಕೆಟ್ಟ ಹೆಸರು ತರುತ್ತಿದ್ದೀನಿ. ನಾನು 9ನೇ ತರಗತಿ ಪಾಸ್ ಆಗುವುದಿಲ್ಲ ಎಂದು ನನಗೆ ಗೊತ್ತಿತ್ತು. ಅದಕ್ಕೆ ನಾನು ಎಲ್ಲಿಯಾದರು ಹೋಗಬೇಕು ಎಂದು ತೀರ್ಮಾನ ಮಾಡಿದೆ. ಐ ಲವ್ ಯೂ ಅಮ್ಮ- ಅಪ್ಪ. ಅಮ್ಮ ಇಂದು ನಮ್ಮ ಮೂರು ಜನರ ಮಾನ ಮಾರ್ಯದೆ ಹೋಯಿತು. ಅದಕ್ಕೆ ನಾನು ಈ ರೀತಿ ತೀರ್ಮಾನ ಮಾಡಿದೆ.
ಅಣ್ಣ- ಅಕ್ಕಂದಿರೆ, ನೀವು ಅಂದರೆ ನನಗೆ ತುಂಬಾ ಇಷ್ಟ. ಬಾವ ಪವನಾ, ಜೀವನ್ ತುಂಬಾ ಇಷ್ಟ. ರಮ್ಯಾ ನಿನ್ನ ಮದುವೆ ಚೆನ್ನಾಗಿ ನಡೆಯಬೇಕು. ಎಲ್ಲರನ್ನು ತುಂಬಾ ನೆನಪಿಸಿಕೊಳ್ಳುತ್ತೀನಿ ಎಂದು ಬಾಲಕಿ ಡೆತ್‍ನೋಟ್ ಬರೆದು ಕರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv