ಮನಿಲಾ: ಯುವತಿಯೊಬ್ಬಳು ಬೀಚ್‍ನಲ್ಲಿ ಸ್ಟ್ರಿಂಗ್ ಬಿಕಿನಿ ಧರಿಸಿದ್ದಕ್ಕೆ ಪೊಲೀಸರು ಆಕೆಯನ್ನು ಬಂಧಿಸಿದ ಘಟನೆ ಫಿಲಿಫೈನ್ಸ್ ನಲ್ಲಿ ನಡೆದಿದೆ.
ಲಿನ್ ಟ್ಸು ಟಿಂಗ್(26) ಅರೆಸ್ಟ್ ಆದ ಯುವತಿ. ಮೂಲತಃ ತೈವಾನ್‍ನವಳಾಗಿರುವ ಲಿನ್ ತನ್ನ ಪ್ರಿಯಕರನ ಜೊತೆ ಬೋರಾಕೇಯಲ್ಲಿರವ ಪುಕ ಬೀಚಿಗೆ ಬಂದಿದ್ದಳು. ಈ ವೇಳೆ ಆಕೆ ಬಿಳಿ ಬಣ್ಣದ ಸ್ಟ್ರಿಂಗ್ ಬಿಕಿನಿ ಧರಿಸಿದ್ದಳು. ಹಾಗಾಗಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
Advertisement
ಮಾಧ್ಯಮಗಳ ಪ್ರಕಾರ ಲಿನ್ ಆ ಬಿಕಿನಿ ಧರಿಸಿದ್ದನ್ನು ನೋಡಿದ ಹೋಟೆಲ್ ಸಿಬ್ಬಂದಿ ಆಕೆಗೆ ಎಚ್ಚರಿಕೆ ನೀಡಿದ್ದರು. ಆದರೆ ಲಿನ್ ಸಿಬ್ಬಂದಿ ಮಾತು ಕೇಳದೇ ಬಿಕಿನಿ ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾಳೆ. ಸದ್ಯ ಯುವತಿ ಬಿಕಿನಿಯಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಬೋರಾಕೇ ಇಂಟರ್ ಏಜೆನ್ಸಿ ಪುನರ್ವಸತಿ ನಿರ್ವಹಣಾ ತಂಡ ಪೊಲೀಸರಿಗೆ ಮಾಹಿತಿ ನೀಡಿದೆ.
Advertisement
Advertisement
ಫಿಲಿಫೈನ್ಸ್ ನವರಿಗೆ ಏಷ್ಯಾದವರಂತೆ ನಮ್ಮದೇ ಆದ ಸಾಂಸ್ಕೃತಿಕ ಮೌಲ್ಯಗಳನ್ನು ಹೊಂದಿದ್ದೇವೆ. ಅದನ್ನು ಎಲ್ಲರೂ ಗೌರವಿಸಬೇಕು ಎಂದು ಆಗುತ್ತಿದ್ದಂತೆ ಬೋರಾಕೇ ಇಂಟರ್ ಏಜೆನ್ಸಿ ಪುನರ್ವಸತಿ ನಿರ್ವಹಣಾ ತಂಡ ಮುಖ್ಯಸ್ಥ ನೇಟಿವಿಡಾಡ್ ಬರ್ನಾರ್ಡಿನೋ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಲಿನ್ ಅಕ್ಟೋಬರ್ 9ರಂದು ಬಿಳಿ ಬಿಕಿನಿ ಧರಿಸಿದ್ದಳು. ಅಲ್ಲದೆ ಮರುದಿನ ಮತ್ತೆ ಅದೇ ರೀತಿಯ ಬಿಕಿನಿ ಧರಿಸಿದ್ದ ಕಾರಣ ಪೊಲೀಸರು ಆಕೆ ತಂಗಿದ್ದ ಹೋಟೆಲಿಗೆ ಹೋಗಿ ಆಕೆಯನ್ನು ಬಂಧಿಸಿದ್ದಾರೆ.
Advertisement
ಮಲಯ ಪೊಲೀಸ್ ಮುಖ್ಯಸ್ಥ ಮೇಜರ್ ಜೆಸ್ ಬೇಲಾನ್, ಕಾಮಪ್ರಚೋದಕ ಹಾಗೂ ಅಶ್ಲೀಲ ಫೋಟೋವನ್ನು ಪ್ರದರ್ಶಿಸಿದ್ದಕ್ಕೆ ಲಿನ್‍ಗೆ 2,500 ಫಿಲಿಪೈನ್ಸ್ ಕರೆನ್ಸಿ(ಅಂದಾಜು 3,500 ರೂ.) ದಂಡ ವಿಧಿಸಲಾಗಿದೆ ಎಂದು ಹೋಟೆಲ್ ಮಾಲೀಕರು ಆಕೆಗೆ ತಿಳಿಸುವಂತೆ ಹೇಳಿದ್ದರು. ಈ ವೇಳೆ ಲಿನ್ ಹಾಗೂ ಆಕೆಯ ಪ್ರಿಯಕರ ಇದು ನಮ್ಮ ದೇಶದಲ್ಲಿ ಸಾಮಾನ್ಯವೆಂದು ಹೇಳಿದ್ದಾಗ ಅವರ ಪದ್ಧತಿಗಳು ಮತ್ತು ಸಂಪ್ರದಾಯಗಳು ನಮ್ಮ ದೇಶದಲ್ಲಿ ಒಂದೇ ಆಗಿರಲ್ಲ. ಅವರು ನಮ್ಮ ದೇಶದ ಸಂಸ್ಕೃತಿ- ಸಂಪ್ರದಾಯವನ್ನು ಗೌರವಿಸಬೇಕು ಎಂದು ಜೆಸ್ ಬೇಲಾನ್ ತಿಳಿಸಿದ್ದಾರೆ.