– ಕೊಲೆ, ಸುಲಿಗೆ, ಕೊಲೆ ಯತ್ನ, ದನಗಳ್ಳತನ ಕೇಸ್ ಆರೋಪಿಯಾಗಿರೋ ಮದನ ಬುಗಡಿ
ಹುಬ್ಬಳ್ಳಿ: ರೌಡಿಶೀಟರ್‌ವೊಬ್ಬನನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಗಿರೀಶ್ ಮಟ್ಟಣ್ಣನವರ್ (Girish Mattannavar) ಪರಿಚಯಿಸಿರುವ ಪ್ರಸಂಗ ನಡೆದಿದೆ.
ಮಾಧ್ಯಮಗಳಿಗೆ ಹೇಳಿಕೆ ನೀಡುವ ವೇಳೆ ತಮ್ಮ ಪಕ್ಕದಲ್ಲಿ ನಿಂತಿದ್ದ ಮದನ ಬುಗಡಿ ಎಂಬ ವ್ಯಕ್ತಿಯನ್ನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಎಂದು ಮಟ್ಟಣ್ಣನವರ್ ಪರಿಚಯಿಸಿದ್ದಾರೆ. ಆದರೆ, ಆ ವ್ಯಕ್ತಿ ಹುಬ್ಬಳ್ಳಿಯಲ್ಲಿ ಕುಖ್ಯಾತ ರೌಡಿಶೀಟರ್. ಈತ ಹುಬ್ಬಳ್ಳಿ ವಿವಿಧ ಠಾಣೆಗಳಲ್ಲಿ ರೌಡಿಶೀಟರ್ ಆಗಿದ್ದಾನೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣವನ್ನು ಸರ್ಕಾರ ಎನ್‌ಐಎಗೆ ವರ್ಗಾಯಿಸಬೇಕು: ಪ್ರತಾಪ್ ಸಿಂಹ ಆಗ್ರಹ
ಹಳೇ ಹುಬ್ಬಳ್ಳಿ ಶಿವಶಂಕರ್ ಕಾಲೊನಿಯ ತಾಂಡಾ ನಿವಾಸಿ ಈ ಮದನ ಬುಗಡಿ. ಕೊಲೆ, ಕೊಲೆ ಯತ್ನ, ಸುಲಿಗೆ, ದೊಂಬಿ, ದನಗಳ್ಳತನ ಸೇರಿ ವಿವಿಧ ಪ್ರಕರಣಗಳು ಈತನ ಮೇಲಿವೆ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
2017ರಲ್ಲಿ ನಡೆದ ದೊಡ್ಡಮನಿ ಎಂಬವರ ಕೊಲೆ ಪ್ರಕರಣದಲ್ಲಿ ಮದನ್ ಬುಗಡಿ ಇದ್ದಾನೆ. ಹೆಣ್ಣಿನ ವಿಷಯದಲ್ಲಿ ದೊಡ್ಮಮನಿ ಎಂಬವರ ಕೊಲೆ ಪ್ರಕರಣದಲ್ಲಿ ಬುಗಡಿ ಭಾಗಿಯಾಗಿದ್ದ. 2017ರ ಪೆಬ್ರುವರಿ 2 ರಂದು ಘಟನೆ ನಡೆದಿತ್ತು. ಇದನ್ನೂ ಓದಿ: ಕೂಲಿಂಗ್ ಗ್ಲಾಸ್ ಧರಿಸಿ ವಿಚಾರಣೆಗೆ ಹಾಜರಾದ ʻಬುರುಡೆʼ ಸಮೀರ್ – ವಿಚಾರಣೆ ಶುರು
ಹುಬ್ಬಳ್ಳಿ ತಾಲೂಕಿನ ಕುಸಗಲ್‌ನಲ್ಲಿ ನಡೆದಿದ್ದ ಪರಶುರಾಮ್ ದೊಡ್ಡಮನಿ ಕೊಲೆ ಪ್ರಕರಣದಲ್ಲಿ ಬುಗಡಿ 2ನೇ ಆರೋಪಿಯಾಗಿದ್ದಾನೆ. ಸಾಕ್ಷಾಧಾರಗಳ ಕೊರತೆಯಿಂದಾಗಿ ಕೊಲೆ ಪ್ರಕರಣದಲ್ಲಿ ಮದನ್ ಬುಗಡಿ ಬಿಡುಗಡೆಯಾಗಿದ್ದಾನೆ. ದನಗಳ ಕಳ್ಳತನ ಮಾಡುವಲ್ಲಿ ಈತ ನಿಸ್ಸೀಮ ಎನ್ನಲಾಗಿದೆ.
ಸುಲಿಗೆ ದರೋಡೆ ಸೇರಿ ಹಲವಾರು ಪ್ರಕರಣಗಳಲ್ಲಿ ಹುಬ್ಬಳ್ಳಿ ವಿವಿಧ ಠಾಣೆಗಳಲ್ಲಿ ಮದನ್ ಮೇಲೆ ಪ್ರಕರಣಗಳು ದಾಖಲಾಗಿವೆ. ಪ್ರತಿ ರೌಡಿ ಪರೇಡ್‌ನಲ್ಲಿ ರೌಡಿಶೀಟರ್ ಮದನ್ ಬುಗಡಿ ಹಾಜರಾಗುತ್ತಾನೆ. ಕಳೆದ ಡಿಸೆಂಬರ್ 30 ರಂದು ನಡೆದ ರೌಡಿ ಪರೇಡ್ ವೇಳೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಕ್ಲಾಸ್ ತೆಗೆದುಕೊಂಡಿದ್ದರು.