– ಅಶ್ವಿನಿ V/S ಗಿಲ್ಲಿ ಮಾತಿನ ಯುದ್ಧ; ಗೆಲ್ಲೋದ್ಯಾರು?
ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಅಭಿಷೇಕ್ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗಿದ್ದಾರೆ. ಅದಕ್ಕೆ ಟಾಸ್ಕ್‌ವೊಂದನ್ನು ನೀಡಲಾಗಿದೆ.
ಟಾಸ್ಕ್‌ಗೆ ಸಂಬಂಧಿಸಿದಂತೆ ಬಿಗ್‌ಬಾಸ್ ಪ್ರೋಮೊವೊಂದನ್ನು ಹಂಚಿಕೊಂಡಿದೆ. ಅದರಲ್ಲಿ, ಮನಸ್ಸಿನಲ್ಲಿ ಸಮಯ ಎಣಿಸಿ 12 ನಿಮಿಷ ಆದ ಬಳಿಕ ಬೆಲ್ ಬಾರಿಸಬೇಕು. ಈ ವೇಳೆ ಅವರ ಲೆಕ್ಕಾಚಾರ ತಪ್ಪಿಸಲು ಮನೆಯ ಸ್ಪರ್ಧಿಗಳು ಅಡ್ಡಿಯುಂಟು ಮಾಡಬಹುದು. 12 ನಿಮಿಷ ಆದಮೇಲೆ ಯಾರು ಬೆಲ್ ಬಾರಿಸುತ್ತಾರೋ ಅವರು ಕ್ಯಾಪ್ಟನ್ ಆಗುತ್ತಾರೆ.
ಮಾತಿನ ಆಟದಲ್ಲಿ ಗಿಲ್ಲಿ ಮತ್ತು ಅಶ್ವಿನಿ ಗೌಡ ಮುಖಾಮುಖಿಯಾಗಿದ್ದಾರೆ. ಈ ವೇಳೆ ಗಿಲ್ಲಿ ಅವರು ಅಶ್ವಿನಿ ಗೌಡ ಕಾಲೆಳೆದಿದ್ದಾರೆ. ಅಶ್ವಿನಿ ಗೌಡ ಅವರ ಹೆಸರಿಟ್ಟುಕೊಂಡು ಗಿಲ್ಲಿ ಟಾಂಗ್ ಕೊಟ್ಟಿರುವುದನ್ನು ಪ್ರೋಮೊದಲ್ಲಿ ಕಾಣಬಹುದು.
‘ಏನ್.. ರಘು ಅಣ್ಣ ನಿಮ್ಮನ್ನು ಅಶ್ವಿನಿ ಅಂತ ಕರೆಯದೆಯೇ ‘ಆಶು’ ಅಂತ ಕರೆಯಬೇಕಿತ್ತಾ? ಅಶ್ವಿನಿ… ಮೇಡಂ. ನಿಮ್ಮ ಇನ್‌ಶಿಯಲ್ ಏನಾದ್ರು A ಅಂತ ಇದ್ರೆ. ಏ ಅಶ್ವಿನಿ ಮೇಡಂ ಅಂತ ಕರೀತಿನಿ. ಗೇಟ್ ಹತ್ತಿರ ಬಂದು ನಾನು ಮನೆಗೆ ಹೋಗ್ತೀನಿ ಅಂದ್ರೆ ಹೋಗಿ. ನಾವೇನು ಬೇಡ ಅಂತ ನಿಮ್ಮನ್ನ ಹಿಡಿದುಕೊಂಡಿದ್ದೀವಾ?’ ಅಂತ ಅಶ್ವಿನಿಗೆ ಗಿಲ್ಲಿ ಟಾಂಗ್ ಕೊಟ್ಟಿದ್ದಾರೆ.
ಆಗ ಅಶ್ವಿನಿ ಗೌಡ ಮಾತನಾಡಿ, ‘ನಿನ್ನಂಥವರನ್ನ ಎಷ್ಟು ಜನ ನೋಡಿಲ್ಲ ನಾನು’ ಅಂತ ಗಿಲ್ಲಿಗೆ ತಿರುಗೇಟು ಕೊಡುತ್ತಾರೆ. ಆಗ ಗಿಲ್ಲಿ, ‘ಆದ್ರೆ ನನ್ನನ್ನ ನೋಡಿರಲ್ಲ’ ಅಂತ ಮತ್ತೆ ಅಶ್ವಿನಿಗೆ ಟಾಂಗ್ ಕೊಟ್ಟಿದ್ದಾರೆ. ಈ ಮಾತಿನ ಆಟದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಅಭಿಷೇಕ್ ಬೆಲ್ ಬಾರಿಸುತ್ತಾರೆ. ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಅಭಿಷೇಕ್ ಆಗುತ್ತಾರಾ? ಅಥವಾ ಯಾರಾಗುತ್ತಾರೆ ಎಂಬುದು ಸದ್ಯದ ಕುತೂಹಲ.


