ಲಂಡನ್: ಇಂಗ್ಲೆಂಡ್ ಸಂಶೋಧಕರು 180 ಮಿಲಿಯನ್ ವರ್ಷಗಳಷ್ಟು ಹಳೆಯದಾದ ‘ಸೀ ಡ್ರ್ಯಾಗನ್’ ಪಳೆಯುಳಿಕೆಯನ್ನು ಕಂಡುಹಿಡಿದಿದ್ದಾರೆ.
Advertisement
ಯುಕೆ ಸಂಶೋಧಕರು ಇಚ್ಥಿಯೋಸಾರ್‍ನ ಬೃಹತ್ ಪಳೆಯುಳಿಕೆ ಅವಶೇಷವನ್ನು ಕಂಡುಹಿಡಿದಿದ್ದಾರೆ. ಇದನ್ನು ಆಡುಮಾತಿನಲ್ಲಿ ‘ಸಮುದ್ರ(ಸೀ) ಡ್ರ್ಯಾಗನ್’ ಎಂದು ಕರೆಯಲಾಗುತ್ತದೆ. ಈ ಪಳೆಯುಳಿಕೆಯು ಅತ್ಯಂತ ದೊಡ್ಡದಾಗಿದ್ದು, ಇದರ ದೇಹವು ಸಂಪೂರ್ಣ ಅಸ್ಥಿಪಂಜರವಾಗಿರುವುದರಿಂದ ಸಂಶೋಧಕರು ಇದನ್ನು ಈ ಪ್ರದೇಶದಲ್ಲಿನ ಅತ್ಯಂತ ಮಹತ್ವದ ಸಂಶೋಧನೆಯಲ್ಲಿ ಒಂದಾಗಿದೆ ಎಂದು ವಿವರಿಸುತ್ತಾರೆ. ಇದನ್ನೂ ಓದಿ: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್
Advertisement
Advertisement
ಇಚ್ಥಿಯೋಸಾರ್‍ಗಳ ದೇಹದ ಆಕಾರ ಡಾಲ್ಫಿನ್‍ಗಳನ್ನು ಹೋಲುತ್ತವೆ. ಈ ತಳಿಯು 250 ದಶಲಕ್ಷ ವರ್ಷಗಳ ಹಿಂದೆ ಮೊದಲು ಕಾಣಿಸಿಕೊಂಡಿದ್ದು, ನಂತರ ಸುಮಾರು 90 ದಶಲಕ್ಷ ವರ್ಷಗಳ ಹಿಂದೆಯೇ ಅಳಿದುಹೋದವು ಎಂದು ಸಂಶೋಧಕರು ವಿವರಿಸಿದ್ದಾರೆ.
Advertisement
ಲೀಸೆಸ್ಟರ್‌ಶೈರ್ ಮತ್ತು ರಟ್‌ಲ್ಯಾಂಡ್ ವೈಲ್ಡ್ ಲೈಫ್ ಟ್ರಸ್ಟ್ ನ ಸಂರಕ್ಷಣಾ ತಂಡದ ನಾಯಕ ಜೋ ಡೇವಿಸ್, ಮಾಲೀಕ ಆಂಗ್ಲಿಯನ್ ವಾಟರ್ ಸಹಭಾಗಿತ್ವದಲ್ಲಿ ಈ ಶೋಧ ಕಾರ್ಯ ನಡೆದಿದೆ. ರಟ್ಲ್ಯಾಂಡ್ ಕೌಂಟಿಯ ಜಲಾಶಯದಲ್ಲಿ ಸುಮಾರು 10 ಮೀಟರ್ ಉದ್ದದ ಅಸ್ಥಿಪಂಜರ ಪತ್ತೆಯಾಗಿದೆ. ಇದನ್ನೂ ಓದಿ: ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡಿದವನು ಸೇರಿ 5 ಜನ ಅರೆಸ್ಟ್
ತಮ್ಮ ಸಂಶೋಧನೆ ಕುರಿತು ಮಾತನಾಡಿದ ಡೇವಿಸ್, ಈ ಸಂಶೋಧನೆಯು ನನ್ನ ವೃತ್ತಿಜೀವನದ ಪ್ರಮುಖ ಅಂಶವಾಗಿದೆ. ಈ ಜೀವಿ ಸಮುದ್ರದಲ್ಲಿ ಈಜಿದೆ ಎಂದು ಯೋಚಿಸಿದರೆ ರೋಮಾಂಚನವಾಗುತ್ತೆ. ಇದು ಅಸಾಧಾರಣವಾದ ದೇಹದ ಗಾತ್ರವನ್ನು ಹೊಂದಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.