ಬಾಗಲಕೋಟೆ: ಸಚಿವ ಮುರಗೇಶ್ ನಿರಾಣಿ (Murugesh Nirani) ಬೆಂಬಲಿಗರಿಂದ ಗಿಫ್ಟ್ ಪಾಲಿಟಿಕ್ಸ್ ಮುಂದುವರಿದಿದೆ. ಮಹಿಳೆ ಸಕ್ಕರೆ ವಾಪಸ್ ಮಾಡಿದ ಸುದ್ದಿಯ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವೀಡಿಯೋ ವೈರಲ್ ಆಗಿದೆ.
ಹೌದು. ಬೀಳಗಿ ವಿಧಾನಾಸಭಾ ಕ್ಷೇತ್ರದ ಉದಗಟ್ಟಿ ಗ್ರಾಮದಲ್ಲಿ ರಾತ್ರಿ ಹೊತ್ತು ಸಕ್ಕರೆ ಪ್ಯಾಕೆಟ್ ಹಂಚುತ್ತಿರುವ ವೀಡಿಯೋ ವೈರಲ್ ಆಗಿದೆ. ಸಚಿವರ ಬೆಂಬಲಿಗರು ಮನೆಮನೆಗಳಿಗೆ ತೆರಳಿ ಸಕ್ಕರೆ ಪ್ಯಾಕೆಟ್ (Sugar Packet) ವಿತರಿಸುತ್ತಿರುವುದು ಬಯಲಾಗಿದೆ. ಸದ್ಯ ಗಿಫ್ಟ್ ಪಾಲಿಟಿಕ್ಸ್ ಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಸಚಿವ ಮುರುಗೇಶ್ ನಿರಾಣಿ ಬೆಂಬಲಿಗರು ಹಂಚಿದ ಸಕ್ಕರೆ ತಿರಸ್ಕರಿಸಿದ ಮಹಿಳೆಗೆ ಭಾರೀ ಬೆಂಬಲ
ಏನಿದು ಘಟನೆ..?: ಕೆಲ ದಿನಗಳ ಹಿಂದೆ ಗಲಗಲಿ ಗ್ರಾಮದಲ್ಲಿ ಸಕ್ಕರೆ ಪ್ಯಾಕೆಟ್ ಹಂಚಿಕೆ ವೇಳೆ ಮಹಿಳೆಯೊಬ್ಬರು ಸಕ್ಕರೆಯನ್ನ ತಿರಸ್ಕರಿಸಿದ್ದರು. ಈ ಘಟನೆ ಬೆನ್ನಲ್ಲೇ ಮತ್ತೆ ಸಕ್ಕರೆ ಹಂಚಿಕೆ ಮುಂದುವರಿದಿದೆ. ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಮತ್ತೊಬ್ಬರು ಸಕ್ಕರೆ ಪ್ಯಾಕೆಟ್ ತಿರಸ್ಕರಿಸಿದ್ದಾರೆ. ಶುಕ್ರವಾರ ರಾತ್ರಿ ನಾರಾಯಣ ಉಪ್ಪಾರ ಮನೆ ಹೊರಗಡೆ ನಿರಾಣಿ ಬೆಂಬಲಿಗರು ಸಕ್ಕರೆ ಪ್ಯಾಕೆಟ್ ಇಟ್ಟು ಹೋಗಿದ್ದಾರೆ.
ಉಪ್ಪಾರ ಅವರು ತಡರಾತ್ರಿ ಎದ್ದು ಬಂದು ಹೊರಗಡೆ ನೋಡಿದಾಗ ಸಕ್ಕರೆ ಪ್ಯಾಕೆಟ್ ಇರುವುದು ಬೆಳಕಿಗೆ ಬಂದಿದೆ. ನಾವು ಮನೆಯಲ್ಲಿ ಇಲ್ಲದ ವೇಳೆ ಯಾರೋ ಬಂದು ಇಟ್ಟಿದ್ದಾರೆ ನಮಗೆ ಸಕ್ಕರೆ ಬೇಕಾಗಿಲ್ಲ. ಪ್ರತಿ ತಿಂಗಳು ಕೊಡಬೇಕಾಗಿತ್ತಲ್ಲ. ಈಗ ಬಂದ ಯಾಕೆ ಸಕ್ಕರೆ ಕೊಡುತ್ತಿದ್ದಾರೆ. ನಮಗೆ ನಿರಾಣಿಯವರ ಐದು ಕೆಜಿ ಸಕ್ಕರೆ ಬೇಕಾಗಿಲ್ಲ ಎಂದು ಕಿಡಿಕಾರಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k