ಕಿರುತೆರೆ ಜನಪ್ರಿಯ ಮಜಾಭಾರತ(Majabharatha), ಗಿಚ್ಚಿ ಗಿಲಿಗಿಲಿ, ಗಿಚ್ಚಿ ಗಿಲಿಗಿಲಿ 2, ಸೇರಿದಂತೆ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿದ್ದ ಚಂದ್ರಪ್ರಭಾ (Chandraprabha) ಅವರು ಇದೀಗ ಗುಟ್ಟಾಗಿ ಮದುವೆ (Wedding) ಆಗಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ಪ್ರಸ್ತುತ ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಚಂದ್ರಪ್ರಭಾ ಆಕ್ಟೀವ್ ಆಗಿದ್ದಾರೆ. ವೀಕೆಂಡ್ ಮೂಡ್‌ನಲ್ಲಿರುವ ಪ್ರೇಕ್ಷಕರಿಗೆ ತಮ್ಮ ಹಾಸ್ಯದ ಮೂಲಕ ಮನರಂಜನೆ ನೀಡುತ್ತಾರೆ. ಶೋನಲ್ಲಿ ಮದುವೆಯಾಗಿಲ್ಲ ಹೆಣ್ಣು ಕೊಡಿ, ಹುಡುಗಿ ಬೇಕು ಎಂದು ಆಗಾಗ ಹೇಳುತ್ತಿದ್ದರು. ಇದನ್ನೇ ಟಾಪಿಕ್ ಆಗಿ ಮಾತನಾಡಿದ್ದರು. ಈಗ ಅವರು ಸೈಲೆಂಟ್ ಹಸೆಮಣೆ ಏರಿರೋದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ:ಕಂಗನಾ ಸಿನಿಮಾ ನೋಡಿ ಕಣ್ಣೀರಿಟ್ಟ ರಾಜಮೌಳಿ ತಂದೆ
Advertisement
Advertisement
ಕೆಲ ದಿನಗಳ ಹಿಂದೆ ಚಂದ್ರಪ್ರಭಾ ಅವರು ಭಾರತಿ ಪ್ರಿಯಾ ಎಂಬುವವರನ್ನು ಮದುವೆಯಾಗಿದ್ದಾರೆ. ಆದರೆ ಈ ಬಗ್ಗೆ ನಟ ಯಾವುದೇ ಅಪ್‌ಡೇಟ್ ನೀಡಿಲ್ಲ. ಮದುವೆಯಾಗಿರೋದನ್ನ (Wedding) ಯಾಕೆ ಮುಚ್ಚಿಟ್ರಿ? ಹೆಂಡತಿ ಸುಂದರವಾಗಿದ್ರೂ ಯಾಕೆ ಹೆಣ್ಣು ಬೇಕು ಅಂತೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಿಡಿಕಾರಿದ್ದಾರೆ.
Advertisement
ಗುರುಹಿರಿಯರು-ಆಪ್ತರ ಸಮ್ಮುಖದಲ್ಲಿ ನಟ ಚಂದ್ರಪ್ರಭಾ ಮತ್ತು ಭಾರತಿ ಪ್ರಿಯಾ ಮದುವೆಯಾಗಿದ್ದಾರೆ. ಮದುವೆಯಾಗಿ ಒಂದು ವಾರ ಕಳೆದಿದೆ ಎಂದು ಹೇಳಲಾಗುತ್ತಿದೆ. ಎಲ್ಲದಕ್ಕೂ ಚಂದ್ರಪ್ರಭಾ ಉತ್ತರ ನೀಡುವವರೆಗೂ ಕಾದುನೋಡಬೇಕಿದೆ.