‘ಗಿಚ್ಚಿ ಗಿಲಿಗಿಲಿ’ ವೇದಿಕೆಯಲ್ಲಿ ಚಂದ್ರಪ್ರಭಾ ಮತ್ತೆ ಮದುವೆ- ಕಣ್ಣೀರಿಟ್ಟ ನಟ

Public TV
1 Min Read
chandra prabha

ಜಾಭಾರತ, ಗಿಚ್ಚಿ ಗಿಲಿಗಿಲಿ ಶೋ ಮೂಲಕ ಮನೆ ಮಾತಾದ ನಟ ಚಂದ್ರಪ್ರಭಾ (Chandraprabha) ಅವರು ಇತ್ತೀಚಿಗೆ ಸೈಲೆಂಟ್‌ ಆಗಿ ಹಸೆಮಣೆ ಏರಿದ್ದರು. ತಮ್ಮ ಮದುವೆ (Wedding) ಬಗ್ಗೆ ಎಲ್ಲೂ ಹೇಳದೇ ಮುಚ್ಚಿಟ್ಟಿದ್ದಾರೆ ಎಂದು ನೆಟ್ಟಿಗರ ಕೆಂಗಣ್ಣಿಗೆ ನಟ ಗುರಿಯಾಗಿದ್ದರು. ಈಗ ತಮ್ಮ ಮದುವೆ ಬಗ್ಗೆ ಚಂದ್ರಪ್ರಭಾ ಅವರು ಮಾತನಾಡಿದ್ದಾರೆ. ‘ಗಿಚ್ಚಿ ಗಿಲಿಗಿಲಿ’ 2 (Gicchi Giligili 2) ವೇದಿಕೆಯಲ್ಲಿ ನಟ ಮತ್ತೆ ಮದುವೆಯಾಗಿದ್ದಾರೆ.

chandra prabha 2

ಕಾಮಿಡಿ ಶೋ ಕಾರ್ಯಕ್ರಮದ ಮೂಲಕ ಸ್ಪರ್ಧಿಯಾಗಿ ಅಭಿಮಾನಿಗಳನ್ನ ನಗೆಗಡಲಲ್ಲಿ ತೇಲಿಸಿದ ನಟ ಚಂದ್ರಪ್ರಭಾ ಅವರು ಕೆಲ ದಿನಗಳ ಹಿಂದೆ ಭಾರತಿ ಎಂಬುವವರನ್ನ ಮದುವೆಯಾಗಿದ್ದರು. ಸರಳವಾಗಿ ಆಪ್ತರ ಸಮ್ಮುಖದಲ್ಲಿ ಚಂದ್ರಪ್ರಭಾ ಮದುವೆ ನೆರವೇರಿತ್ತು. ಆದರೆ ತಮ್ಮ ಮದುವೆ ಬಗ್ಗೆ ಎಲ್ಲೂ ಕೂಡ ನಟ ಪೋಸ್ಟ್ ಹಾಕಿರಲಿಲ್ಲ. ಮದುವೆ ಆಗಿರುವ ಬಗ್ಗೆ ಎಲ್ಲೂ ಸುಳಿವು ನೀಡಿರಲಿಲ್ಲ. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಚಂದ್ರಪ್ರಭಾ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಇದೀಗ ‘ಗಿಚ್ಚಿ ಗಿಲಿಗಿಲಿ 2’  ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಚಂದ್ರಪ್ರಭಾ ಅವರು ಮತ್ತೆ ಮಡದಿ ಭಾರತಿ ಪ್ರಿಯಾ (Bharathi Priya) ಜೊತೆ ಮದುವೆಯಾಗಿದ್ದಾರೆ. ನಾನು ಇಷ್ಟಪಟ್ಟ ಹುಡುಗಿ ಎಂದು ಹೇಳುವುದ್ದಕ್ಕಿಂತ, ನನ್ನನ್ನು ಹೆಚ್ಚಿಗೆ ಇಷ್ಟಪಡುತ್ತಿರುವ ವ್ಯಕ್ತಿ ಎಂದು ಹೇಳಲು ಖುಷಿಯಾಗುತ್ತದೆ. ಆಕೆಯನ್ನು ಕಣ್ಣೀರು ಹಾಕಿಸದಂತೆ ನೋಡಿಕೊಳ್ಳಬೇಕು ಅನ್ನೋದು ನನ್ನ ಆಸೆ ಎಂದು ಚಂದ್ರಪ್ರಭಾ ಮಾತನಾಡಿದ್ದಾರೆ. ಇದನ್ನೂ ಓದಿ:ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ

ನಮ್ಮ ತಂದೆ ಇರಬೇಕಿತ್ತು ನನ್ನ ಮದುವೆ ನೋಡಬೇಕಿತ್ತು. ನನ್ನ ಮದುವೆ ನೋಡಿ ಸಾಯಬೇಕು ಎಂಬುದು ನನ್ನ ತಂದೆಯ ಆಸೆಯಾಗಿತ್ತು ಎಂದು ಚಂದ್ರಪ್ರಭಾ ವೇದಿಕೆಯಲ್ಲಿ ಕಣ್ಣೀರಿಟ್ಟಿದ್ದಾರೆ. ಈ ವಾಹಿನಿಯ ‘ಗಿಚ್ಚಿ ಗಿಲಿಗಿಲಿ 2’ ವಾರಾಂತ್ಯದ ಚಂದ್ರಪ್ರಭಾ ಪ್ರೋಮೋ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಹೊಸ ಜೋಡಿಗೆ ಫ್ಯಾನ್ಸ್‌ ಶುಭಕೋರುತ್ತಿದ್ದಾರೆ.

Share This Article