ಲಕ್ನೋ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ದುಷ್ಕರ್ಮಿಯೋರ್ವ ಬೈಕ್‍ನಿಂದ ಡಿಕ್ಕಿ ಹೊಡೆದು, ಹಲ್ಲೆ ನಡೆಸಿರುವ ಘಟನೆ ಗಾಜಿಯಾಬಾದ್‍ನ ಲೋನಿಯಲ್ಲಿ (Ghaziabad’s Loni) ರಸ್ತೆಯಲ್ಲಿ ನಡೆದಿದೆ.
ಅಕ್ಟೋಬರ್ 25 ರಂದು ರಾತ್ರಿ 9 ಗಂಟೆ ಸುಮಾರಿಗೆ ಲೋನಿಯ ಬಾಗ್ ರಾಣಾಪ್ (Loni’s Bagh Ranap) ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದೆ. ಬಾದಲ್ ಥಳಿತಕ್ಕೋಳಗಾದವನಾಗಿದ್ದು, ಆರೋಪಿಯನ್ನು ಅಜಯ್ ಎಂದು ಗುರುತಿಸಲಾಗಿದೆ.
ತನ್ನ ಸ್ನೇಹಿತನೊಂದಿಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾದಲ್‍ಗೆ ಏಕಾಏಕಿ ಬೈಕ್‍ನಲ್ಲಿ ಬಂದು ಅಜಯ್ ಡಿಕ್ಕಿ ಹೊಡೆದು, ನಂತರ ಬೈಕ್‍ನಿಂದ ಇಳಿದು ಥಳಿಸಲು ಆರಂಭಿಸುತ್ತಾನೆ. ಈ ವೇಳೆ ಬಾದಲ್ ಅನ್ನು ಬಿಡಿಸಲು ಮಧ್ಯ ಪ್ರವೇಶಿಸಿದ ಸ್ನೇಹಿತನ ಮೇಲೂ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ಕಾರನ್ನು ವೇಗವಾಗಿ ಚಲಿಸುತ್ತಾ ಡಿಕ್ಕಿ ಮೇಲೆ ಪಟಾಕಿ ಸಿಡಿಸಿದ ಕಿಡಿಗೇಡಿಗಳು- ವೀಡಿಯೋ ವೈರಲ್
ಘಟನೆಯ ನಂತರ, ಸ್ಥಳೀಯರು ಗಾಯಗೊಂಡ ಬಾದಲ್ ಅನ್ನು ರಕ್ಷಿಸಿ, ಆತನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕೂಡಲೇ ಬಾದಲ್ ಅನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಇದೀಗ ಈ ಬಗ್ಗೆ ಬಾದಲ್ ಕುಟುಂಬಸ್ಥರು ಆರೋಪಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಘಟನೆ ಸಂಬಂಧ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ರಜನೀಶ್ ಉಪಾಧ್ಯಾಯ ಅವರು, ಬಾದಲ್ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಶೀಘ್ರವೇ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೂಜೆಗಾಗಿ ಅಡುಗೆ ಮಾಡುತ್ತಿದ್ದಾಗ ಗ್ಯಾಸ್ ಸಿಲಿಂಡರ್ ಸ್ಫೋಟ – ಹಲವರ ಸ್ಥಿತಿ ಗಂಭೀರ