ಬೆಳಗಾವಿ: ಅಧಿಕಾರಿಗಳ ನಿರ್ಲಕ್ಷದಿಂದಾಗಿ ಘಟಪ್ರಭಾ ನದಿಗೆ (Ghataprabha River) ಮೂಡಲಗಿಯ ಸುಣಧೋಳಿ ಗ್ರಾಮದ ಬಳಿ ನಿರ್ಮಿಸಲಾದ ಸೇತುವೆ ಹಾಗೂ ಬ್ಯಾರೇಜ್ ಗೇಟ್ ಉಕ್ಕಿಹರಿಯುತ್ತಿದ್ದು, ಮೂರು ದಿನಗಳ ಕಾಲ ಸೇತುವೆ ಮೇಲೆ ಸಂಚಾರ ನಿಷೇಧಿಸಿ ತಹಶಿಲ್ದಾರ್ ಬಿ.ಎಸ್ ಕಡಕಬಾವಿ ಆದೇಶ ಹೊರಡಿಸಿದ್ದಾರೆ.
ಹಿಡಕಲ್ ಜಲಾಶಯದಿಂದ (Hidkal Dam) ಘಟಪ್ರಭಾ ನದಿಗೆ 2.20 ಟಿಎಂಸಿ ನೀರು ಬಿಡಲು ನಿರ್ಧಾರ ಮಾಡಿ, ದಿನಕ್ಕೆ 4800 ಕ್ಯುಸೆಕ್ ನೀರು ಬಿಡಲಾಗಿದೆ. ನದಿಗೆ ನೀರು ಬಂದರೂ ಸೇತುವೆ ಕಮ್ ಬ್ಯಾರೇಜ್ ಗೇಟ್ ತೆರೆಯದ ಪರಿಣಾಮ ಈಗ ಸೇತುವೆ ಮೇಲೆ ನೀರು ಹರಿಯುತ್ತಿದೆ. ಈ ವಿಚಾರ ಅಧಿಕಾರಿಗಳಿಗೆ ತಿಳಿದಿದ್ದರೂ ಬ್ರಿಡ್ಜ್ ಗೇಟ್ ತೆರೆಯದೇ ನಿರ್ಲಕ್ಷವಹಿಸಿದ್ದಕ್ಕೆ ಜನ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಟ್ವಿಸ್ಟ್ – ಈಗಾಗಲೇ A1 ಆರೋಪಿ ಅರೆಸ್ಟ್!
Advertisement
Advertisement
ಸೇತುವೆ ಮೇಲಿಂದ ನೀರು ಹರಿಯುತ್ತಿರುವ ಕಾರಣ ಸೇತುವೆ ದಾಟಲು ವಾಹನ ಸವಾರರು ಹಾಗೂ ಜನ ಪರದಾಡುತ್ತಿದ್ದಾರೆ. ಸದ್ಯ ಸೇತುವೆ ಮೇಲೆ ಯಾರೂ ಓಡಾಡಬಾರದೆಂದು ತಹಶಿಲ್ದಾರ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಚುನಾವಣಾ ಚೆಕ್ ಪೋಸ್ಟ್‌ಗೆ ಲಾರಿ ಡಿಕ್ಕಿ – ಕೂದಲೆಳೆ ಅಂತರದಲ್ಲಿ ಸಿಬ್ಬಂದಿ ಪಾರು
Advertisement