ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಕೋವಿಡ್ 19 ಲಸಿಕೆಯ ಬೂಸ್ಟರ್ ಡೋಸ್ ಪಡೆದಿದ್ದಾರೆ. ತಮ್ಮ ಅಧಿಕೃತ ನಿವಾಸ ಶ್ವೇತ ಭವನದಲ್ಲಿ ಬೈಡನ್ ಫೈಜರ್ ಲಸಿಕೆಯ ಮೂರನೇ ಡೋಸ್ ಪಡೆದುಕೊಂಡರು.
ಲಸಿಕೆ ತೆಗೆದುಕೊಂಡ ಬಳಿಕ ಮಾತನಾಡಿದ 78 ವರ್ಷದ ಬೈಡನ್, ನಾನು 65 ವರ್ಷ ಮೇಲ್ಪಟ್ಟ ವ್ಯಕ್ತಿ ಎಂದು ಹೇಳಿ ನಗೆ ಚಟಾಕಿ ಹಾರಿಸಿದರು. ಇದನ್ನೂ ಓದಿ: ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್
Advertisement
ಅಮೆರಿಕದ ಶೇ.77 ರಷ್ಟು ಜನ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಆದರೆ ಇದು ಏನೇನು ಸಾಲದು. ಎಲ್ಲರೂ ಲಸಿಕೆ ಪಡೆಯಬೇಕು ಎಂದು ಹೇಳಿದ್ದಾರೆ. ಕಳೆದ ಡಿಸೆಂಬರ್ 21 ರಂದು ಮೊದಲ, ಜನವರಿ 11 ರಂದು ಬೈಡನ್ ಎರಡನೇ ಡೋಸ್ ಪಡೆದಿದ್ದರು.
Advertisement
Today I got my COVID-19 booster shot—and just like my first and second dose, it was safe and easy.
Get vaccinated. Together, can we save lives and beat this virus. pic.twitter.com/gtNAQqmOoj
— Joe Biden (@JoeBiden) September 27, 2021
Advertisement
ಕÀಳೆದ ವಾರ ವೃದ್ಧರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ನೀಡುವಂತೆ ಅಮೆರಿಕದ ರೋಗಗಳ ನಿಯಂತ್ರಣ ಕೇಂದ್ರ (ಸಿಡಿಸಿ) ಶಿಫಾರಸು ಮಾಡಿತ್ತು. ಇದನ್ನೂ ಓದಿ: ಡೋಣಿ ನದಿ ಸೇತುವೆಯಲ್ಲಿ ಬಿರುಕು – ಆಗಮಿಸಲಿದ್ದಾರೆ ದೆಹಲಿ ಎಂಜಿನಿಯರ್‌ಗಳು
Advertisement
ನಸಿರ್ಂಗ್ ಹೋಂಗಳಲ್ಲಿ ದಾಖಲಾದವರು, 65 ವರ್ಷಕ್ಕಿಂತ ಮೇಲ್ಪಟ್ಟವರು, ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ 50-64 ವಯೋಮಾನದವರಿಗೆ ಬೂಸ್ಟರ್ ಡೋಸ್ ನೀಡಬೇಕು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿತ್ತು.
ಫೈಜರ್ ಕಂಪನಿಯ ಲಸಿಕೆ ತೆಗೆದುಕೊಂಡು ಕನಿಷ್ಠ 6 ತಿಂಗಳು ಆಗಿದ್ದರೆ, ಅಂಥವರಿಗೆ ಬೂಸ್ಟರ್ ಡೋಸ್ ನೀಡಬೇಕು ಎಂದು ಸಮಿತಿ ಹೇಳಿದೆ.