ಬೆಂಗಳೂರು: ಕಾಲೇಜು ಯೂನಿಫಾರ್ಮ್ ವ್ಯವಸ್ಥೆ ಕಡ್ಡಾಯ ಮಾಡುವ ಮೊದಲು ಮುಸ್ಲಿಂ ಮುಖಂಡರ ಅಭಿಪ್ರಾಯ ಕೇಳಬೇಕು ಎಂದು ಮುಸ್ಲಿಂ ಮುಖಂಡ ಉಮರ್ ಷರೀಫ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಟೈಟಾಗಿರುವ ಬಟ್ಟೆಗಳನ್ನು ಹೆಣ್ಣುಮಕ್ಕಳು ತೊಡುವುದಕ್ಕೆ ನಾವು ಬಿಡಲ್ಲ. ಲೂಸಾಗಿರುವ ಯೂನಿಫಾರ್ಮ್ ಬಟ್ಟೆ ಹಾಗೂ ತಲೆಯನ್ನು ಕವರ್ ಮಾಡಲು ಹಿಜಬ್ ಬೇಕು. ಇದು ನಮ್ಮ ಪರಂಪರೆ. ಯೂನಿಫಾರ್ಮ್ ನಿಯಮ ತರಲಿ ಆದರೆ ಅದರಲ್ಲಿ ಹಿಜಬ್ ಇರಲಿ ಎಂದು ಉಮರ್ ಷರೀಫ್ ಕಾಲೇಜು ವಸ್ತ್ರ ಸಂಹಿತೆ ಬಗೆಗಿನ ಗೊಂದಲದ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಇದನ್ನೂ ಓದಿ: ಕಾಲೇಜಿನಲ್ಲಿ ಪ್ರತಿಭಟಿಸಿದರೆ ಎಫ್ಐಆರ್ – ಹಿಜಬ್ ವಿದ್ಯಾರ್ಥಿನಿಯರ ಪೋಷಕರಿಗೆ ಎಚ್ಚರಿಕೆ
Advertisement
Advertisement
ಬ್ರಾಹ್ಮಣ ಹುಡುಗರು ತರಗತಿಗಳಿಗೆ ಜುಟ್ಟನ್ನು ಕಟ್ಟಿಕೊಂಡು ಬರುವುದಿಲ್ಲವಾ? ಅದಕ್ಕೆ ಯಾರಾದರೂ ವಿರೋಧ ವ್ಯಕ್ತಪಡಿಸುತ್ತಾರಾ? ಹಿಜಬ್ ಧರಿಸುವುದರಿಂದ ತಪ್ಪೇನಿದೆ? ಅದು ಅವರವರ ಧರ್ಮ ಎಂದಿದ್ದಾರೆ.
Advertisement
ಹಿಜಬ್ ಹೆಣ್ಣಿಗೆ ಕೆಟ್ಟ ದೃಷ್ಟಿಗಳಿಂದ ರಕ್ಷಿಸುತ್ತದೆ. ಬೇಕಾದರೆ ಹಿಂದು ಹುಡುಗರು ಕೇಸರಿ ಶಾಲು ಧರಿಸಿ ಶಾಲೆಗೆ ಬರಲಿ. ಮುಸ್ಲಿಂ ಮುಖಂಡನಾಗಿ ನಾನೇ ಕೇಸರಿ ಶಾಲು ತೊಡುವೆ. ಅದರಿಂದ ನಮಗೇನೂ ತೊಂದರೆ ಇಲ್ಲ. ಇದು ರಾಜಕೀಯವಾಗಿ ಬಣ್ಣ ತೆಗೆದುಕೊಂಡಿದೆ. ಯೂನಿಫಾರ್ಮ್ ವಿಚಾರದ ಬಗ್ಗೆ ಮುಸ್ಲಿಂ ಮುಖಂಡರ ಜೊತೆಯೂ ಸರ್ಕಾರ ಅಭಿಪ್ರಾಯ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸುವುದು ಮೂಲಭೂತ ಹಕ್ಕು: ಸಿದ್ದರಾಮಯ್ಯ
Advertisement
ನಮ್ಮ ಹೆಣ್ಣು ಮಕ್ಕಳು ಹಿಜಬ್ ಧರಿಸಿ ಬರುತ್ತಿದ್ದಾರೆ ಅಷ್ಟೇ. ಅವರು ಗನ್ ಹಿಡಿದುಕೊಂಡು ಬರುತ್ತಿಲ್ಲ ಎಂದು ಉಮರ್ ಷರೀಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.