– ರಾಜ್ಯದಲ್ಲಿ ಮೂರು ತಿಂಗಳ ತನಕ ಬಿ ಖಾತಾ ಅಭಿಯಾನ
ಬೆಂಗಳೂರು: ಇಷ್ಟು ದಿನ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಬಿ-ಖಾತಾ (B Khata) ಅಭಿಯಾನ ಈಗ ರಾಜ್ಯಾದ್ಯಂತ ವಿಸ್ತರಣೆ ಆಗಿದೆ. ಬಿ-ಖಾತಾ ನೀಡಲು, ಪಡೆಯಲು 3 ತಿಂಗಳು ಡೆಡ್ ಲೈನ್ ಕೊಟ್ಟಿದ್ದು, One Time Solution ಅಡಿ 3 ತಿಂಗಳ ಒಳಗೆ ಬಿ-ಖಾತಾ ಮಾಡಿಸಿಕೊಳ್ಳಬಬಹುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸೂಚಿಸಿದ್ದಾರೆ. ಆದರೆ ಇನ್ನುಮುಂದೆ ಅನಧಿಕೃತ ಬಡಾವಣೆಗಳಿಗೆ ಅನುಮತಿ ಇಲ್ಲ. ಅನಧಿಕೃತ ಬಡಾವಣೆಗಳು ತಲೆ ಎತ್ತಿದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
11 ಮಹಾ ನಗರಪಾಲಿಕೆಗಳು ಒಳಗೊಂಡಂತೆ 316 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ-ಖಾತಾ ನೀಡಲು ಸರ್ಕಾರ ಮುಂದಾಗಿದೆ. ಸ್ವತ್ತಿಗೆ ಹಾಲಿ ಇರುವ ತೆರಿಗೆಗಿಂತ ದುಪ್ಪಟ್ಟು ತೆರಿಗೆ (Tax) ಕೊಟ್ಟು ಬಿ-ಖಾತಾ ಮಾಡಿಸಿಕೊಳ್ಳಬಹುದು. ಸುಮಾರು 40 ಲಕ್ಷ ಆಸ್ತಿಗಳು ಅನಧಿಕೃತವಾಗಿದ್ದು, 4 ಸಾವಿರ ಕೋಟಿ ಆದಾಯ ನಿರೀಕ್ಷೆ ಇದೆ. ಇದನ್ನೂ ಓದಿ: ಕಳಿಂಗ ವಿವಿ ವಿದ್ಯಾರ್ಥಿನಿ ಆತ್ಮಹತ್ಯೆ – ಲಕ್ನೋದಲ್ಲಿ 21 ವರ್ಷದ ಯುವಕನ ಬಂಧಿಸಿದ ಪೊಲೀಸರು
ಅಂದಹಾಗೆ ಇವತ್ತು ಇ- ಖಾತೆ ನೀಡುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಲ್ಕು ಇಲಾಖೆಗಳ ಸಚಿವರ ಜೊತೆ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಯಿತು. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಆಯುಕ್ತರು ವೀಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು. ಬಿ-ಖಾತಾ ನೀಡುವ ಸಂಬಂಧ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಡೆಡ್‌ಲೈನ್ ಫಿಕ್ಸ್ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ನೋಟಿಸ್‌ಗೆ 9 ಪುಟಗಳ ಉತ್ತರ ನೀಡಿದ ಯತ್ನಾಳ್
ಸಿಎಂ ಸಭೆ ಹೈಲೈಟ್ಸ್:
* ರಾಜ್ಯದ ಇನ್ನು ಮುಂದೆ ಅನಧಿಕೃತ ಬಡಾವಣೆಗಳಿಗೆ ರಾಜ್ಯದಲ್ಲಿ ಕಿಂಚಿತ್ತೂ ಅವಕಾಶ ಇಲ್ಲ.
* ಮಧ್ಯವರ್ತಿಗಳಿಗೆ, ಬ್ರೋಕರ್ ಗಳಿಗೆ ತಕ್ಷಣ ಗೇಟ್ ಪಾಸ್.
* 11 ಮಹಾ ನಗರಪಾಲಿಕೆಗಳು ಒಳಗೊಂಡಂತೆ 316 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ-ಖಾತಾ ಯೋಜನೆ.
* ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು One Time Solution ಯೋಜನೆ.
* 3 ತಿಂಗಳಲ್ಲಿ ಎಲ್ಲರಿಗೂ ಬಿ ಖಾತಾ, ದುಪ್ಪಟ್ಟು ತೆರಿಗೆ ಕಟ್ಟಬೇಕು, ಬಳಿಕ ರೆಗ್ಯುಲೇಟ್ ಮಾಡುವುದು.
* ಸೆಪ್ಟೆಂಬರ್ 10, 2024ರ ಒಳಗೆ ನಿರ್ಮಾಣಗೊಂಡಿರುವ ಅನಧಿಕೃತ ಆಸ್ತಿಗಳಿಗೆ ಮಾತ್ರ ಬಿ-ಖಾತಾ ಕೊಡುವ ಸರ್ಕಾರ.
* ಒಟ್ಟಾರೆ 40 ಲಕ್ಷ ಅನಧಿಕೃತ ಆಸ್ತಿಗಳನ್ನ ಗುರುತಿಸಿರುವ ರಾಜ್ಯ ಸರ್ಕಾರ.
* ಕಾವೇರಿ-2.0 ಇ ತಂತ್ರಾಂಶದ ಮೂಲಕವೇ ಇ ಖಾತೆಗೆ ಅರ್ಜಿ ಸಲ್ಲಿಸಿ ಬಿ ಖಾತಾ ಪಡೆಯಬಹುದು.
* ಸರ್ಕಾರದ ಬಿ-ಖಾತಾ ಯೋಜನೆಯಿಂದ 4,000 ಕೋಟಿ ಹೆಚ್ಚುವರಿ ತೆರಿಗೆ ನಿರೀಕ್ಷೆ ಮಾಡಬಹುದು.