DistrictsKalaburagiKarnatakaLatestMain Post

ಕಲಬುರಗಿ ಕೆನರಾ ಬ್ಯಾಂಕ್ ಜನರೇಟರ್ ಬ್ಲಾಸ್ಟ್ – ಹೊತ್ತಿ ಉರಿದ ರೂಮ್

- ಬೆಂಕಿ ನಂದಿಸಲು ಹೋಗಿ ಕುಸಿದು ಬಿದ್ದ ಅಗ್ನಿಶಾಮಕ ಸಿಬ್ಬಂದಿ

ಕಲಬುರಗಿ: ಕೆನರಾ ಬ್ಯಾಂಕ್ ಜನರೇಟರ್ ಬ್ಲಾಸ್ಟ್ ಆಗಿ ರೂಮ್ ಹೊತ್ತಿ ಉರಿದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿಯ ಸೂಪರ್ ಮಾರ್ಕೆಟ್ ನಲ್ಲಿರುವ ಕೆನರಾ ಬ್ಯಾಂಕ್ ಹಿಂಭಾಗದಲ್ಲಿ ಜನರೇಟರ್ ಸಲುವಾಗಿ ಪ್ರತ್ಯೇಕ ಕೋಣೆ ನಿರ್ಮಿಸಲಾಗಿತ್ತು. ಆದರೆ ಇಂದು ಸಂಜೆ ಏಳು ಗಂಟೆ ಸುಮಾರಿಗೆ ಏಕಾಏಕಿಯಾಗಿ ಆ ರೂಮಿನಲ್ಲಿ ಜನರೇಟರ್ ಬ್ಲಾಸ್ಟ್ ಆಗಿ ಹೊತ್ತಿ ಉರಿದಿದೆ. ಇದನ್ನೂ ಓದಿ: ನಾನು ’24 ಕ್ಯಾರೆಟ್ ಕಾಂಗ್ರೆಸ್ಸಿಗ’, ಪಕ್ಷದೊಂದಿಗೆ ಯಾವುದೇ ಅಸಮಾಧಾನವಿಲ್ಲ: ಗುಲಾಂ ನಬಿ ಆಜಾದ್

ಬೆಂಕಿ ಹೊತ್ತಿ ಉರಿಯುತ್ತಿದ್ದ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಲು ಪ್ರಾರಂಭಿಸಿದರು. ಆದರೆ ಬೆಂಕಿ ನಂದಿಸುವ ವೇಳೆ ಅಗ್ನಿಶಾಮಕ ಸಿಬ್ಬಂದಿ ಲೋ ಬಿಪಿಯಾಗಿ ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಆ ಸಿಬ್ಬಂದಿಯನ್ನ ಕಲಬುರಗಿಯ ಜಯದೇವ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Back to top button