ನವದೆಹಲಿ: ಜನರಲ್ ಉಪೇಂದ್ರ ದ್ವಿವೇದಿಯವರು (General Upendra Dwivedi) ಭಾರತೀಯ ಸೇನಾ ಸಿಬ್ಬಂದಿ (ಸಿಒಎಎಸ್) ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಮೇ 2022 ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಜನರಲ್ ಮನೋಜ್ ಪಾಂಡೆಯವರು (General Manoj Pande) ನಿವೃತ್ತರಾಗಿದ್ದು, ಅವರು ಅಧಿಕಾರವನ್ನು ದ್ವಿವೇದಿಯವರಿಗೆ ಹಸ್ತಾಂತರಿಸಿದ್ದಾರೆ. ಇದಕ್ಕೂ ಮುನ್ನ ಜನರಲ್ ದ್ವಿವೇದಿ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿದ್ದರು.
Advertisement
ದ್ವಿವೇದಿಯವರು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಮತ್ತು ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚಾರ್ಜ್‍ನ ಮೂರು ಪ್ರಶಂಸನಾ ಪತ್ರಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಜೊತೆಗೆ ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದ್ದೀರಿ: ಟೀಂ ಇಂಡಿಯಾಕ್ಕೆ ಮೋದಿ ಅಭಿನಂದನೆ
Advertisement
ಜನರಲ್ ಉಪೇಂದ್ರ ದ್ವಿವೇದಿ ಮಧ್ಯಪ್ರದೇಶದ ನಿವಾಸಿಯಾಗಿದ್ದು, ಸೈನಿಕ್ ಸ್ಕೂಲ್ ರೇವಾದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಜ.1981ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಿದರು. ಡಿ.1984ರಲ್ಲಿ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‍ನ 18ನೇ ಬೆಟಾಲಿಯನ್‍ಗೆ ನಿಯೋಜಿಸಲ್ಪಟ್ಟರು. ನಂತರ ಅವರು ಕಾಶ್ಮೀರದಲ್ಲಿ ಕಮಾಂಡರ್ ಆಗಿದ್ದರು. ಅವರು ದೈಹಿಕ ತರಬೇತಿ ಕೋರ್ಸ್‍ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
Advertisement
Advertisement
ಜನರಲ್ ದ್ವಿವೇದಿಯವರ ಸಾಗರೋತ್ತರ ಅಧಿಕಾರಾವಧಿಯಲ್ಲಿ ಸೊಮಾಲಿಯಾ ಸರ್ಕಾರದ ಮಿಲಿಟರಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ನಿವೃತ್ತರಾದ ಜನರಲ್ ಪಾಂಡೆಯವರು ಕಾಪ್ರ್ಸ್ ಆಫ್ ಇಂಜಿನಿಯರ್ಸ್ ವಿಭಾಗದಿಂದ ಮೊದಲ ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿದ್ದರು. ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ, ಜನರಲ್ ಪಾಂಡೆ ಅವರನ್ನು ಡಿ.1982ರಲ್ಲಿ ಕಾರ್ಪ್ಸ್ ಆಫ್ ಇಂಜಿನಿಯರ್ಸ್‍ಗೆ ನಿಯೋಜಿಸಲಾಗಿತ್ತು. ಅವರು ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ (ಎಲ್‍ಒಸಿ) ಪಲ್ಲನ್‍ವಾಲಾ ಸೆಕ್ಟರ್‌ನಲ್ಲಿ ಆಪರೇಷನ್ ಪರಾಕ್ರಮ್ ಸಮಯದಲ್ಲಿ ಕೆಲಸ ನಿರ್ವಹಿಸಿದ್ದರು. ಇದನ್ನೂ ಓದಿ: 3ನೇ ಬಾರಿ ಪ್ರಧಾನಿಯಾದ ಬಳಿಕ ಮೋದಿ ಮೊದಲ `ಮನ್ ಕಿ ಬಾತ್’