– 14 ಕ್ಷೇತ್ರಗಳ ಮೊದಲ ಹಂತದ ಮತದಾನ ಮುಕ್ತಾಯ
ಬೆಂಗಳೂರು: ರಾಜ್ಯದ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದೆ. 14 ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆದಿದ್ದು, ಜನ ಉತ್ಸಾಹದಿಂದಲೇ ಮತ ಚಲಾಯಿಸಿದ್ದಾರೆ.
ಸಂಜೆ 6 ಗಂಟೆ ವೇಳೆಗೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಬೂತ್‌ಗಳಲ್ಲಿ ಇವಿಎಂ ಯಂತ್ರಗಳ ಪವರ್ ಬಟನ್ ಆಫ್ ಮಾಡಿದ ಮತಗಟ್ಟೆ ಅಧಿಕಾರಿಗಳು ಅವುಗಳನ್ನು ಸ್ಟ್ರಾಂಕ್ ರೂಮಿನಲ್ಲಿರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ 38.23% ಮತದಾನ-ಬೆಂಗಳೂರು ನಗರದಲ್ಲಿ ಅತಿ ಕಡಿಮೆ, ದಕ್ಷಿಣ ಕನ್ನಡದಲ್ಲಿ ಗರಿಷ್ಠ
Advertisement
Advertisement
ಈ ಬೆನ್ನಲ್ಲೇ ಚುನಾವಣಾ ಅಧಿಕಾರಿಗಳು ಬೆಂಗಳೂರು ನಗರ ಜಿಲ್ಲೆಯ 3 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಮತ್ತು ಸ್ಟ್ರಾಂಗ್ ರೂಂ ಕೇಂದ್ರಗಳ ವಿವರವನ್ನು ಹಂಚಿಕೊಂಡಿದ್ದಾರೆ. ಅವುಗಳ ಮಾಹಿತಿ ಹೀಗಿದೆ.. ಇದನ್ನೂ ಓದಿ: 2nd Phase Voting: ಹೇಮ ಮಾಲಿನಿಗಿಂತಲೂ ಸ್ಟಾರ್ ಚಂದ್ರು ಅತ್ಯಂತ ಶ್ರೀಮಂತ ಅಭ್ಯರ್ಥಿ!
Advertisement
3 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಮತ್ತು ಸ್ಟ್ರಾಂಗ್ ರೂಂ ಕೇಂದ್ರಗಳ ವಿವರ:
1. ಬೆಂಗಳೂರು ಕೇಂದ್ರ :- ಮೌಂಟ್ ಕಾರ್ಮೆಲ್ ಕಾಲೇಜು, ಅರಮನೆ ರಸ್ತೆ, ವಸಂತನಗರ, ಬೆಂಗಳೂರು.
2. ಬೆಂಗಳೂರು ಉತ್ತರ :- ಸೆಂಟ್ ಜೋಸೆಫ್ ಕಾಲೇಜು, ಮಲ್ಯ ರಸ್ತೆ, ಬೆಂಗಳೂರು.
3. ಬೆಂಗಳೂರು ದಕ್ಷಿಣ :- ಎಸ್.ಎಸ್.ಎಂ.ಆರ್.ವಿ ಕಾಲೇಜು, 9ನೇ ಬ್ಲಾಕ್, ಜಯನಗರ, ಬೆಂಗಳೂರು.
Advertisement
ಬೆಂಗ್ಳೂರಿನಲ್ಲಿ ಮತದಾನ ನೀರಸ:
ಕರ್ನಾಟಕದಲ್ಲಿ ಸಂಜೆ 5 ಗಂಟೆ ಹೊತ್ತಿಗೆ 63.90% ರಷ್ಟು ಮತದಾನವಾಗಿದೆ. ಬೆಂಗಳೂರು ನಗರ ಜಿಲ್ಲೆಯ ಮೂರು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲೂ ಶೇಕಡವಾರು ಮತದಾನ 50% ದಾಟಿದೆ. ಬೆಂಗಳೂರು ಗ್ರಾಮಾಂತರದಲ್ಲಿ 61.78%, ಬೆಂಗಳೂರು ಉತ್ತರ 50.04%, ಬೆಂಗಳೂರು ಕೇಂದ್ರ 48.61%, ಬೆಂಗಳೂರು ದಕ್ಷಿಣ 49.37% ಮತ ಚಲಾವಣೆಯಾಗಿದೆ.
ಉಡುಪಿ-ಚಿಕ್ಕಮಗಳೂರು 72.13%, ದಕ್ಷಿಣ ಕನ್ನಡ 71.83%, ಹಾಸನ 71.13%, ಚಿತ್ರದುರ್ಗ 67% ಬಿರುಸಿನ ಮತದಾನವಾಗಿದೆ. ತುಮಕೂರು 72.10%, ಮಂಡ್ಯ 74.87%, ಮೈಸೂರು 65.85%, ಚಾಮರಾಜನಗರ 69.60%, ಚಿತ್ರದುರ್ಗ 70.97%, ಕೋಲಾರ 71.26% ಮತ ಚಲಾವಣೆಯಾಗಿದೆ.