ಬೆಂಗಳೂರು: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಆರಂಭಗೊಂಡಿದೆ. 18 ರಾಜ್ಯಗಳು 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 91 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ. ಈ ಸಂಬಂಧ ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆಗಳನ್ನ ಮಾಡಿಕೊಂಡಿದೆ.
ಒಂದು ಲಕ್ಷದ 66 ಸಾವಿರ ಮತಗಟ್ಟೆಗಳಲ್ಲಿ 1961 ಅಭ್ಯರ್ಥಿಗಳ ಭವಿಷ್ಯ ಮೊದಲ ಹಂತದದಲ್ಲಿ ನಿರ್ಧಾರ ಆಗಲಿದೆ. ಇನ್ನು ಕ್ಷೇತ್ರವಾರು ಮತದಾನಕ್ಕೆ ಚುನಾವಣಾ ಆಯೋಗ ಸಮಯ ನಿಗದಿ ಮಾಡಿದ್ದು ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ, ಅಂಡಮಾನ್ ನಿಕೋಬಾರ್ ನಲ್ಲಿ ಬೆಳಗ್ಗೆ ಏಳರಿಂದ ಸಂಜೆ ಆರು ಗಂಟೆ, ಉತ್ತಾರಖಂಡ್ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬೆಳಗ್ಗೆ ಏಳರಿಂದ ಸಂಜೆ ಐದು ಗಂಟೆ, ಅರುಣಾಚಲ ಪ್ರದೇಶ, ಮಿಜೋರಾಂ, ಸಿಕ್ಕಿಂ, ತ್ರಿಪುರ, ಮಣಿಪುರ, ನಾಗಲ್ಯಾಂಡ್, ಮೇಘಾಲಯ ದಲ್ಲಿ ಬೆಳಗ್ಗೆ ಏಳರಿಂದ ಸಂಜೆ ನಾಲ್ಕು ಗಂಟೆವರೆಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ. ಮತದಾನ ಈ ಹಿನ್ನೆಲೆ ರಾಜ್ಯ ಪೊಲೀಸ್ ಸರ್ಕಾರದಲ್ಲಿ ಕೇಂದ್ರ ಭದ್ರತಾ ಪಡೆಗಳನ್ನು ಸುರಕ್ಷತೆಗೆ ನೇಮಕ ಮಾಡಲಾಗಿದೆ.
Advertisement
Advertisement
ಎಲ್ಲಿ ಮತದಾನ:
* ಆಂಧ್ರ ಪ್ರದೇಶದ- 25 ಕ್ಷೇತ್ರ
* ಉತ್ತರ ಪ್ರದೇಶ- 8 ಕ್ಷೇತ್ರ
* ಮಹಾರಾಷ್ಟ್ರದ- 7 ಕ್ಷೇತ್ರ
* ಉತ್ತರಾಖಂಡ ಮತ್ತು ಅಸ್ಸಾಂ ರಾಜ್ಯಗಳ ತಲಾ 5 ಕ್ಷೇತ್ರ
* ಬಿಹಾರ ಮತ್ತು ಒಡಿಶಾದ ತಲಾ 4 ಕ್ಷೇತ್ರ
*ಜಮ್ಮು-ಕಾಶ್ಮೀರ, ಅರುಣಾಚಲ ಪ್ರದೇಶ, ಮೇಘಾಲಯ ಮತ್ತು ಪಶ್ಚಿಮ ಬಂಗಾಳದ ತಲಾ 2 ಕ್ಷೇತ್ರ
* ಮಿಜೋರಾಂ, ಛತ್ತೀಸ್‍ಗಢ, ಮಣಿಪುರ, ನಾಗಾಲ್ಯಾಂಡ್, ಸಿಕ್ಕಿಂ, ಅಂಡಮಾನ್ ಮತ್ತು ನಿಕೋಬಾರ್, ಹಾಗೂ ಲಕ್ಷದ್ವೀಪಗಳ ತಲಾ 1 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ
Advertisement
Advertisement
* ಇದಲ್ಲದೆ, ಆಂಧ್ರ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ವಿಧಾನಸಭೆಗಳ ಎಲ್ಲಾ ಸ್ಥಾನಗಳು ಹಾಗೂ ಒಡಿಶಾ ವಿಧಾನಸಭೆಯ 147 ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳಿಗೂ ಈ ಹಂತದಲ್ಲಿ ಏಕಕಾಲಕ್ಕೆ ಮತದಾನ ನಡೆಯಲಿದೆ.
ದೇಶದಲ್ಲೇ ಅತಿ ಹೆಚ್ಚು ಸ್ಥಾನಗಳಿರುವ ಉತ್ತರ ಪ್ರದೇಶದ ಎಂಟು ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಕೈರಾನಾ, ಮುಜಾಫರ್ ನಗರ, ಘಾಝಿಯಬಾದ್, ಮೇರಠ್, ಗೌತಮ್ ಬುದ್ದ ನಗರ, ಬಾಗ್ಪತ್, ಸಹರಾನ್‍ಪುರ, ಬಿಜ್ನೂರ್ ನಲ್ಲಿ ಮತದಾನ ನಡೆಯಲಿದೆ. ಎಂಟು ಕ್ಷೇತ್ರಗಳಿಗೆ 96 ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಿದ್ದು 16,633 ಕೇಂದ್ರಗಳಲ್ಲಿ ಮತದಾನ ನಡೆಯಲಿದೆ.
ಇಲ್ಲಿ ಕೇಂದ್ರ ಸಚಿವರಾದ ವಿ.ಕೆ. ಸಿಂಗ್, ಸತ್ಯಪಾಲ್ ಸಿಂಗ್ ಹಾಗೂ ಮಹೇಶ್ ಶರ್ಮ, ಆರ್‍ಎಲ್‍ಡಿ ಮುಖಂಡರಾದ ಅಜಿತ್ ಸಿಂಗ್, ಜಯಂತ್ ಚೌಧರಿ ಹಾಗೂ ಇಮ್ರಾನ್ ಮಸೂದ್ ಸೇರಿದಂತೆ ಪ್ರಮುಖರು ಕಣದಲ್ಲಿದ್ದಾರೆ. ದೆಹಲಿಗೆ ಹೊಂದಿಕೊಂಡಿರುವ ಈ ಕ್ಷೇತ್ರಗಳು ಹಲವು ಕಾರಣಗಳಿಗೆ ಮಹತ್ವ ಪಡೆದುಕೊಂಡಿದೆ. ಹಿಂದೂ ಮುಸ್ಲಿಂ ಕೋಮು ಘರ್ಷಣೆಯ ನೆಲ ಮುಜಾಫರ್ ನಗರ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಮತದಾರರು ಹೊಂದಿರುವ ಘಾಝಿಯಬಾದ್, ಎಸ್ಪಿ ಬಿಎಸ್ಪಿ ಮತ್ತು ಆರ್.ಎಲ್.ಡಿ ಮೈತ್ರಿಗೆ ಪ್ರೇರಣೆಯಾದ ಕೈರಾನ್ ಕ್ಷೇತ್ರಗಳು ಮೊದಲ ಹಂತದ ಮತದಾನ ಕ್ಷೇತ್ರಗಳಲ್ಲಿದೆ. ಇಷ್ಟು ಮಾತ್ರವಲ್ಲದೇ ಮೋದಿ ಗೆಲುವಿನ ನಾಗಲೋಕಕ್ಕೆ ಬ್ರೇಕ್ ಹಾಕಲು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ಉಸ್ತುವಾರಿ ವಹಿಸಿಕೊಂಡಿರುವ ಪಶ್ಚಿಮ ಉತ್ತರ ಪ್ರದೇಶದ ಕ್ಷೇತ್ರಗಳಾಗಿದ್ದು ಕಳೆದ ಬಾರಿ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಕಂಡಿದ್ದು ಈಭಾರಿ ಫಲಿತಾಂಶ ಭಾರಿ ನಿರೀಕ್ಷೆ ಮೂಡಿಸಿದೆ.