ಪಾರ್ವತಮ್ಮ ರಾಜ್ ಕುಮಾರ್ ನಂತರ ಮೈಸೂರಿನ ಶಕ್ತಿಧಾಮ ನೋಡಿಕೊಳ್ಳುತ್ತಿರುವ ಗೀತಾ ಶಿವರಾಜ್ ಕುಮಾರ್ (Geetha Shivaraj Kumar) ಇದೀಗ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಾರಿ ಅವರು ಹೈಸ್ಕೂಲ್ (High School) ಶಾಲೆಯೊಂದನ್ನು ದತ್ತು ತಗೆದುಕೊಂಡಿದ್ದು, ಆ ಶಾಲೆಯ ಮಕ್ಕಳ ಕನಸಿಗೆ ರಂಗು ತುಂಬುವ ಕೆಲಸಕ್ಕೆ ಮುಂದಾಗಿದ್ದಾರೆ.
ವೇದ (Veda) ಸಿನಿಮಾದ ಪ್ರಚಾರದ ವೇಳೆ ಸಂಡೂರು (Sandur) ತಾಲ್ಲೂಕಿನ ಇಂಗಳಗಿ ಸಮೀಪದ ಅನ್ನಪೂರ್ಣೇಶ್ವರಿ ವಿದ್ಯಾಪೀಠವು ನಡೆಸುತ್ತಿದ್ದ ಉಚಿತ ವಸತಿಯುತ ಪ್ರೌಢಶಾಲೆಯ ವಿಚಾರವನ್ನು ಶಿವಣ್ಣ ದಂಪತಿಗೆ ತಿಳಿಸಲಾಗಿತ್ತು. ಜೋಗದ ದಿಗಂಬರ ರಾಜಭಾರತಿ ಸ್ವಾಮೀಜಿ 2012ರಲ್ಲಿ ಶುರು ಮಾಡಿದ್ದ ಈ ಶಾಲೆಯು ಅನುದಾನವಿಲ್ಲದೇ ಸೊರಗಿತ್ತು. ಈ ವಿಚಾರವು ತಿಳಿಯುತ್ತಿದ್ದಂತೆಯೇ ಶಾಲೆ ದತ್ತು ಪಡೆಯುವುದಾಗಿ ಗೀತಾ ಶಿವರಾಜ್ ಕುಮಾರ್ ಘೋಷಿಸಿದ್ದರು. ಇದನ್ನೂ ಓದಿ:ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟ ’ಕಾಂತಾರ’ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್
ತಾವು ಮಾತು ಕೊಟ್ಟಂತೆ ನಿನ್ನೆ ಶಾಲೆಗೆ ಭೇಟಿ ನೀಡಿರುವ ಗೀತಾ ಶಿವರಾಜ್ ಕುಮಾರ್, ಮೂಲ ಸೌಕರ್ಯ ಸೇರಿದಂತೆ ಅಗತ್ಯವಿರುವ ಸೌಕರ್ಯವನ್ನು ನೀಡುವುದಾಗಿ ತಿಳಿಸಿದರು. ಕೂಡಲೇ ಟ್ರಸ್ಟ್ ರಚಿಸಿ, ಪದಾಧಿಕಾರಿಗಳ ನೇಮಕ ಮಾಡಿ ಶಾಲೆಯನ್ನು ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.