– ಫುಟ್‌ಪಾತ್ ಮೇಲಿದ್ದ ಅಂಗಡಿಗಳು, ಬೋರ್ಡ್ಗಳ ತೆರವು ಕಾರ್ಯಾಚರಣೆ
ಬೆಂಗಳೂರು: ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು (Safe Footpath Campaign) ಕಾರ್ಯಾರಂಭ ಆಗಿದೆ. ಫುಟ್‌ಪಾತ್‌ಗಳ ಮೇಲಿದ್ದ ಅಂಗಡಿಗಳು ಮತ್ತು ಬೋರ್ಡ್‌ಗಳನ್ನು ಜಿಬಿಎ (GBA) ಸಿಬ್ಬಂದಿ ತೆರವು ಮಾಡುತ್ತಿದ್ದಾರೆ.
ಅಶೋಕ ಪಿಲ್ಲರ್ ಬಳಿ ತೆರವು ಕಾರ್ಯ ಆರಂಭವಾಗಿದೆ. ಅಧಿಕಾರಿಗಳ ನೇತೃತ್ವದಲ್ಲಿ ತೆರವುಗೊಳಿಸಲಾಗುತ್ತಿದೆ. ಕೇಂದ್ರ ಪಾಲಿಕೆಯ 16 ಕಡೆ ಒತ್ತುವರಿ ತೆರವಿಗೆ ಮಾರ್ಕ್ ಮಾಡಲಾಗಿದೆ. 4 ಏರಿಯಾಗಳ 16 ಕಡೆಯಲ್ಲಿ ಒತ್ತುವರಿ ತೆರವಾಗಿದೆ. ಶಿವಾಜಿನಗರ 6 ಕಡೆ, ಗಾಂಧಿನಗರದ 4, ಚಿಕ್ಕಪೇಟೆಯ 4, ಚಾಮರಾಜಪೇಟೆಯ 2 ಕಡೆ ಒತ್ತುವರಿ ತೆರವು ನಡೆಯುತ್ತಿದೆ. ಇದನ್ನೂ ಓದಿ: ಆಟೋ ಚಾಲಕರಿಗೆ ಸಿಹಿ ಸುದ್ದಿ: ಎಲ್‌ಪಿಜಿ ದರ ಬರೋಬ್ಬರಿ 10 ರೂ. ಇಳಿಕೆ
ಹೋಟೆಲ್ ಮುಂಭಾಗ ಪ್ರತೇಕ ಟೀ ಅಂಗಡಿ ಇಡಲಾಗಿತ್ತು. ಹೋಟೆಲ ಮಾಲೀಕ ಮರವನ್ನೂ ಬಿಡದೆ ಸಿಟ್ಟಿಂಗ್ ಅರೆಂಜ್ ಮಾಡಿಕೊಂಡಿದ್ದ. ಜಿಬಿಎ ಸಿಬ್ಬಂದಿ ಎಲ್ಲವನ್ನೂ ತೆರವು ಮಾಡುತ್ತಿದ್ದಾರೆ. ಮನವಿ ಮಾಡಿದರೂ ಅವಕಾಶ ನೀಡದೇ ಸಿಬ್ಬಂದಿ ತೆರವು ಮಾಡಿಸುತ್ತಿದ್ದಾರೆ.
ನಗರದಲ್ಲಿ ಕೆಲ ಹೋಟೆಲ್‌ಗಳು ಕೂಡ ಫುಟ್‌ಪಾತ್ ಒತ್ತವರಿ ತೆರವು ಮಾಡಿಕೊಂಡಿವೆ. ಗ್ರಾಹಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದ್ದವು. ಫುಟ್‌ಪಾತ್ ಮೇಲೆಯೇ ಸೀಟ್ ಹಾಕಿ ವ್ಯವಸ್ಥೆ ಮಾಡಲಾಗಿತ್ತು. ಎಲ್ಲವನ್ನೂ ತೆರವುಗೊಳಿಸಲಾಗುತ್ತಿದೆ.
ಎಲ್ಲೆಲ್ಲಿ ತೆರವು ಕಾರ್ಯಾಚರಣೆ?
* ಟ್ರಿನಿಟಿ ಜಂಕ್ಷನ್‌ನಿಂದ ಎಂಜಿ ರಸ್ತೆ, ಎಂಜಿ ಉದ್ಯಾನದ ವರೆಗೆ
* 100 ಅಡಿ ಇಂದಿರಾನಗರದಿಂದ ದೊಮ್ಮಲೂರು ಫ್ಲೈಓವರ್
* ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಬೆನಗನಹಳ್ಳಿ ರೈಲ್ವೇ ಸೇತುವೆ ವರೆಗೆ
* ಅಶೋಕ್ ಪಿಲ್ಲರ್ ಇಂದ ಮಾದಚನ್ ಪಾರ್ಕ್
* 8ನೇ ಮುಖ್ಯ ರಸ್ತೆ ಕನಕನಪಾಳ್ಯ ರಸ್ತೆಯಿಂದ 15ನೇ ಅಡ್ಡ ರಸ್ತೆ ಜಯನಗರ
* 9ನೇ ಮುಖ್ಯ ರಸ್ತೆ ಕನಕನಪಾಳ್ಯ ರಸ್ತೆಯಿಂದ 15ನೇ ಅಡ್ಡ ರಸ್ತೆ ಜಯನಗರ
* ಆರ್. ವಿ ರಸ್ತೆ ಟೀಚರ್ಸ್ ಕಾಲೇಜಿನಿಂದ ಸೌತ್ ಎಂಡ್ ಸರ್ಕಲ್ ವರೆಗೆ
ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ 4 ಕಡೆ ಪುಟ್ ಪಾತ್‌ತೆರವು ಕಾರ್ಯಾಚರಣೆ
* ವಿದ್ಯಾರಣ್ಯಪುರ ಮುಖ್ಯರಸ್ತೆ,
* ಥಣಿಸಂಧ್ರ ರೈಲ್ವೆ ಪ್ಯಾರಲಲ್ ರೋಡ್
* ಪುಲಕೇಶಿನಗರ ಕ್ಲಾರ್ಕ್ ರೋಡ್
* ಸರ್ವಙ್ಞ ನಗರ ಬಾಣಸವಾಡಿ ಮುಖ್ಯ ರಸ್ತೆ
