– ಜೂನ್‌ನಲ್ಲಿ ನಡೆದಿದ್ದ ಅನುಮಾನಾಸ್ಪದ ಸಾವು
– ಮಾರತ್‌ಹಳ್ಳಿ ಲಾಡ್ಜ್‌ನಲ್ಲಿ ಕೊಲೆ
ಬೆಂಗಳೂರು: ಮಾರತ್‌ಹಳ್ಳಿ ಲಾಡ್ಜ್ ನಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸಲಿಂಗಿಗಳ ಮಧ್ಯೆ ಜಗಳ ನಡೆದು ಕೊಲೆಯಲ್ಲಿ ಅಂತ್ಯಗೊಂಡ ವಿಚಾರ ತನಿಖೆಯ ವೇಳೆ ಬಯಲಾಗಿದೆ.
Advertisement
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರತಹಳ್ಳಿ ಪೊಲೀಸರು ಸ್ನೇಹಿತ ರಾಜಗೋಪಾಲ್‌ನನ್ನು ಕೊಲೆಗೈದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುವಣ್ಣನ್ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಜೂನ್ 4 ರಂದು ಮಾರತ್‌ಹಳ್ಳಿಯ ಲಾಡ್ಜ್‌ನಲ್ಲಿ ರಾಜಗೋಪಾಲ ಮತ್ತು ಮತ್ತೊಬ್ಬ ವ್ಯಕ್ತಿ ಸೇರಿ ರೂಮ್ ಪಡೆದುಕೊಂಡಿದ್ದರು. ಮೂರು ದಿನವಾದರೂ ರಿನಿವಲ್ ಮಾಡಿದ ಕಾರಣ ಜೂನ್ 7 ರಂದು ಲಾಡ್ಜ್ ಸಿಬ್ಬಂದಿ ಕೊಠಡಿ ಪರಿಶೀಲಿಸಲು ಮುಂದಾದಾಗ ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ದೇಹ ಪತ್ತೆಯಾಗಿತ್ತು. ಕೂಡಲೇ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮರಣೋತ್ತರ ಪರೀಕ್ಷೆಯ ವೇಳೆ ಕುತ್ತಿಗೆ ಹಿಸುಕಿ ಉಸಿರು ಗಟ್ಟಿಸಿ ರಾಜ್‌ಗೋಪಾಲನನ್ನು ಕೊಲೆ ಮಾಡಿರುವ ವಿಚಾರ ದೃಢಪಟ್ಟಿತ್ತು. ಅನುಮಾನಾಸ್ಪದ ಸಾವಿನ ಹಿನ್ನಲೆ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
Advertisement
ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
ಲಾಡ್ಜ್‌ನಲ್ಲಿ ಮೊಬೈಲ್ ಟವರ್ ಲೋಕೇಷನ್ ಪರಿಶೀಲಿಸಿದಾಗ ಒಂದು ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿತ್ತು. ಆ ಮೊಬೈಲ್ ನಂಬರ್ ಜಾಡು ಹಿಡಿದಾಗ ತಮಿಳುನಾಡಿನಲ್ಲಿ ತಮಿಳುವಣ್ಣನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಪ್ರಕಟವಾಗಿದೆ. ಇದನ್ನೂ ಓದಿ: ಯುವಕರಿಗೆ ಪೊಲೀಸ್ ಕೆಲ್ಸ – ಕಲರ್ ಕಲರ್ ಕಥೆ ಕಟ್ಟಿದ್ದ ನಕಲಿ ಪೊಲೀಸಪ್ಪ ಪರಾರಿ
ಇಬ್ಬರು ಸಲಿಂಗಿಗಳು:
ಆರೋಪಿ ತಮಿಳುವಣ್ಣನ್ ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ಟೆಕ್ನಿಕಲ್ ಅಸೋಸಿಯೇಟ್ ಆಗಿ ಕೆಲಸ ಮಾಡಿಕೊಂಡಿದ್ದ. ಸಲಿಂಗಿ ಆಗಿದ್ದ ಕಾರಣಕ್ಕೆ ಪತ್ನಿ ಬಿಟ್ಟು ಹೋಗಿದ್ದಳು. 2020ರಲ್ಲಿ ತಮಿಳುವಣ್ಣನಿಗೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ರಾಜಗೋಪಾಲ್ ಪರಿಚಯವಾಗಿದ್ದಾನೆ. ಆತನೂ ಸಲಿಂಗಿ ಆಗಿದ್ದು ಆತನ ಪತ್ನಿಯೂ ಬಿಟ್ಟುಹೋಗಿದ್ದಳು. ಸ್ನೇಹಿತರಾಗಿದ್ದ ಇವರಿಬ್ಬರು ಲಾಡ್ಜ್‌ಗಳಲ್ಲಿ ಉಳಿದುಕೊಂಡು ಖಾಸಗಿ ಕ್ಷಣಗಳನ್ನು ಕಳೆಯುತ್ತಿದ್ದರು.
ಮೇ ತಿಂಗಳಲ್ಲಿ ತಮಿಳುವಣ್ಣನ್‌ಗೆ ದೇವರ ಬೀಸನಹಳ್ಳಿಯಲ್ಲಿ ಇರುವ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿತ್ತು. ಹೀಗಾಗಿ ಚೆನ್ನೈನಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದ. ಶಿಫ್ಟ್ ಆದ ವಿಚಾರವನ್ನು ಸ್ನೇಹಿತ ರಾಜಗೋಪಾಲ್‌ಗೆ ತಿಳಿಸಿರಲಿಲ್ಲ. ತಮಿಳುವಣ್ಣನ್ ಚೆನ್ನೈ ಬಿಟ್ಟು ಹೋಗಿದ್ದಕ್ಕೆ ರಾಜಗೋಪಲ್ ಕೋಪಗೊಂಡಿದ್ದ. ಕೊನೆಗೆ ತಮಿಳುವಣ್ಣನ್ ಬೆಂಗಳೂರಿನಲ್ಲಿರುವ ವಿಚಾರ ತಿಳಿದು ಮೇ ಕೊನೆಯ ವಾರದಲ್ಲಿ ರಾಜಗೋಪಾಲ್ ನಗರಕ್ಕೆ ಬಂದಿದ್ದ. ಬಳಿಕ ಇವರಿಬ್ಬರೂ ಲಾಡ್ಜ್‌ನಲ್ಲಿ ಖಾಸಗಿ ಕ್ಷಣಗಳನ್ನು ಕಳೆದಿದ್ದರು.
ಚೆನ್ನೈಗೆ ತೆರಳಿದ್ದ ರಾಜಗೋಪಲ್ ಜೂನ್ 4ರಂದು ಪುನಃ ಬೆಂಗಳೂರಿಗೆ ಬಂದಿದ್ದ. ರಾಜಗೋಪಾಲ್ ‘ನಿನ್ನ ಬಿಟ್ಟು ಹೋಗುವುದಿಲ್ಲ’ ಎಂದು ತಮಿಳುವಣ್ಣನ ಬಳಿ ಹೇಳಿದ್ದಾನೆ. ಅದೇ ದಿನ ರಾತ್ರಿ ಅದೇ ಲಾಡ್ಜ್‌ನಲ್ಲಿ ರೂಂ ಬಾಡಿಗೆ ಪಡೆದು ಇಬ್ಬರೂ ಉಳಿದುಕೊಂಡಿದ್ದರು. ಮಾರನೇ ದಿನ ತಮಿಳುವಣ್ಣನ್ ರೂಂಗೆ ಬಂದ ವೇಳೆ ಹಣಕಾಸಿನ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು ತಮಿಳುವಣ್ಣನ್ ಹೊಡೆಯಲು ಮುಂದಾದಾಗ ಆಘಾತದಿಂದ ರಾಜಗೋಪಾಲ್ ಕುಸಿದು ಮೃತಪಟ್ಟಿದ್ದಾನೆ. ಇದರಿಂದ ಭಯಗೊಂಡ ತಮಿಳುವಣ್ಣನ್ ಕೊಠಡಿಗೆ ಬೀಗ ಹಾಕಿ ತೆರಳಿದ್ದ. ಜೂನ್ 7 ರಂದು ಲಾಡ್ಜ್ ಸಿಬ್ಬಂದಿ ಕೊಠಡಿ ತೆರೆದಾಗ ರಾಜಗೋಪಾಲ ಶವವಾಗಿ ಪತ್ತೆಯಾಗಿದ್ದ.