ರವಿಚಂದ್ರನ್ ನಟನೆಯ ‘ಹೂ’ ಸೇರಿದಂತೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ನಮಿತಾ ಕೃಷ್ಣ ಜನ್ಮಾಷ್ಟಮಿ ದಿನದಂದೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ನಮಿತಾ ಅವರೇ ಸೋಷಿಯಲ್ ಮೀಡಿಯಾದ ಮೂಲಕ ಬಹಿರಂಗ ಪಡಿಸಿದ್ದಾರೆ. ಪತಿಯ ಜೊತೆ ಅವಳಿ ಮಕ್ಕಳ ಪೋಟೋವನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ನಮಿತಾ ಅವರಿಗೆ ಮದುವೆ ಆಗಿತ್ತು. 2017ರಲ್ಲಿ ಚೆನ್ನೈ ಮೂಲದ ವೀರೇಂದ್ರ ಚೌಧರಿ ಅವರ ಜೊತೆ ನಟಿ ಹಸೆಮಣೆ ಏರಿದ್ದರು. ಇತ್ತೀಚೆಗಷ್ಟೇ ಅವರು ಬೇಬಿ ಪಂಪ್ ಫೋಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದರು. ಸಾಕಷ್ಟು ಅಭಿಮಾನಿಗಳು ನೆಚ್ಚಿನ ನಟಿಗೆ ಶುಭ ಹಾರೈಸಿದ್ದರು. ಮದುವೆಯ ನಂತರ ಸಿನಿಮಾ ರಂಗದಿಂದ ನಮಿತಾ ದೂರವಿದ್ದರೂ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅವರು ಹೊಂದಿದ್ದರು. ಇದನ್ನೂ ಓದಿ:ಉದಯ್ ಹಿಂಬದಿಯಿಂದ ತಬ್ಬಿ ಕಿಸ್ ಮಾಡ್ತಾರೆ: ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳು ಗರಂ
ನಮಿತಾ ಮೂಲತಃ ಗುಜರಾತ್ ಮೂಲದವರು ಆಗಿದ್ದರು, ಹೆಚಚ್ಉ ಫೇಮಸ್ ಆಗಿದ್ದ ತೆಲುಗು ಸಿನಿಮಾ ರಂಗದ ಮೂಲಕ ಆನಂತರ ಕನ್ನಡ ಸಿನಿಮಾ ರಂಗಕ್ಕೂ ಕಾಲಿಟ್ಟ ಅವರು, ರವಿಚಂದ್ರನ್ ಸೇರಿದಂತೆ ಅನೇಕ ಕಲಾವಿದರ ಚಿತ್ರದಲ್ಲಿ ನಟಿಸಿದ್ದಾರೆ. ಸೊಂತಮ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.