ಬೆಂಗಳೂರು: ದೇಶಾದ್ಯಂತ ಸಂಚಲನವನ್ನು ಸೃಷ್ಟಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ನಡೆಸುತ್ತಿರುವ ವಿಶೇಷ ತನಿಖಾ ದಳದ(ಎಸ್‍ಐಟಿ) ಪೊಲೀಸರು ಈಗ ಕರ್ನಾಟಕದ ಎಲ್ಲಾ ಜೈಲುಗಳಲ್ಲಿ ಇರುವ ಸುಪಾರಿ ಹಂತಕರ ವಿಚಾರಣೆ ನಡೆಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.
ಉತ್ತರ ಕರ್ನಾಟಕ ಜೈಲುಗಳು ಸೇರಿದಂತೆ, ಉಡುಪಿ, ಬಿಜಾಪುರ, ಮಂಗಳೂರು, ಬೆಂಗಳೂರು ಜೈಲುಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಗೌರಿ ಅವರ ಹತ್ಯೆಗೆ ನಾಡ ಪಿಸ್ತೂಲು ಬಳಕೆಯಾಗಿರುವ ಅಂಶ ಬೆಳಕಿಗೆ ಬಂದಿದ್ದು, ನಾಡಾ ಪಿಸ್ತೂಲು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಸದಸ್ಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೆ ನಾಡಾ ಪಿಸ್ತೂಲು ಮಧ್ಯಪ್ರದೇಶದಿಂದ ಪೂರೈಕೆಯಾಗಿರುವ ಕುರಿತು ಅನುಮಾನ ಮೂಡಿದ್ದು, ಕರ್ನಾಟಕದ ಬೇರೆಂದು ಗ್ಯಾಂಗ್ ಪಿಸ್ತೂಲು ರವಾನೆ ಮಾಡಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
Advertisement
ಈ ಮದ್ಯೆ ಉಡುಪಿಯ ಜಿಲ್ಲಾ ಕಾರಾಗೃಹಕ್ಕೆ ತನಿಖಾ ತಂಡ ಭೇಟಿ ನೀಡಿದ್ದು, ಯಾವುದೇ ಮಾಹಿತಿ ಲಭಿಸದೆ ಹಿಂದಿರುಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಸುತ್ತಮುತ್ತ ಚಾಲ್ತಿಯಲ್ಲಿರುವ ರೌಡಿ ಶೀಟರ್‍ಗಳ ಬಗ್ಗೆಯು ವಿಚಾರಣೆಯನ್ನು ನಡೆಸಲಾಗುತ್ತಿದೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ
Advertisement
ಪ್ರಕರಣದ ಕುರಿತು ಮತ್ತಷ್ಟು ಸುಳಿವುಗಳನ್ನು ಪಡೆಯುವ ಸಲುವಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಮತ್ತೆ ಕಾಟ್ರೇಜ್‍ಗಳ ಮರು ಪರೀಕ್ಷೆಯನ್ನು ನಡೆಸುತ್ತಿದೆ.