ಬೆಂಗಳೂರು: ಹಂತಕರ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್‍ಗೆ ಜನ್ಮದಿನ ಪ್ರಯುಕ್ತ ಆಚರಿಸಲಾಗಿದ್ದ `ಗೌರಿ ದಿನ’ ಕಾರ್ಯಕ್ರಮ ಆಯೋಜನೆಗೆ ಸರ್ಕಾರ ಪ್ರಯೋಜಕತ್ವ ನೀಡಿಲ್ಲ ಎಂದು ಕವಿತಾ ಲಂಕೇಶ್ ಸ್ಪಷ್ಟಪಡಿಸಿದ್ದಾರೆ.
ನಗರದ ಟೌನ್ ಹಾಲ್ ಬಳಿ ಆಯೋಜಿಸಿದ್ದ ಗೌರಿ ದಿನ ಕಾರ್ಯಕ್ರಮದ ಬಳಿಕ ಪಬ್ಲಿಕ್ ಟಿವಿ ಯೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮವನ್ನು ಗೌರಿಹಬ್ಬ ಎಂದು ರಾಜ್ಯಾದ್ಯಂತ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಗೌರಿ ಹತ್ಯೆ ಆರೋಪಿಗಳನ್ನು ಬಂಧಿಸದ ಕಾರಣ ನಾವು ಇಂದು ವಿಚಾರ ಸಂಕೀರ್ಣವನ್ನು ಮಾತ್ರ ನಡೆಸುತ್ತಿದ್ದೇವೆ ಎಂದರು.
Advertisement
Advertisement
ಈ ಹಿಂದೆ ಗೌರಿ ಟ್ರಸ್ಟ್ ಸ್ಥಾಪನೆ ವೇಳೆ ಗೌರಿ ಹಬ್ಬ ನಡೆಸುವ ಕುರಿತು ಚರ್ಚೆ ನಡೆಸಲಾಗಿತ್ತು, ಆದರೆ ಟ್ರಸ್ಟ್ ನ ಹಲವರ ಅಭಿಪ್ರಾಯದ ಮೇಲೆ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಅಂತಹ ನಾಯಕರು ಭಾಗವಹಿಸಿದ್ದಾರೆ. ಕಾರ್ಯಕ್ರಮಕ್ಕೆ ಸರ್ಕಾರ ಪ್ರಯೋಜಕತ್ವ ನೀಡಿದೆ ಎಂಬ ಆರೋಪಗಳು ದೊರೆಸ್ವಾಮಿ ಅವರಿಗೆ ಅವಮಾನಿಸುವ ಹಾಗೇ ಆಗುತ್ತದೆ ಎಂದರು.
Advertisement
Advertisement
ಕಾರ್ಯಕ್ರಮದ ಭಾಗವಹಿಸದಿರುವ ಸಹೋದರ ಇಂದ್ರಜಿತ್ ಲಂಕೇಶ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಕುಟುಂಬದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ನಮ್ಮ ಸಹೋದರನ ಚಿಂತನೆ, ಅಭಿಪ್ರಾಯ ಭಿನ್ನವಾಗಿದೆ ಅಷ್ಟೇ. ಆದರೆ ನಾವೆಲ್ಲರೂ ಹತ್ಯೆ ಮಾಡಿದವರ ವಿರುದ್ಧ ಹೋರಾಟ ನಡೆಸಿದ್ದೇವೆ. ನಾನು ಮತ್ತು ನಮ್ಮ ಸಹೋದರ ಇಬ್ಬರು ಟ್ರಸ್ಟ್ ನಲ್ಲಿ ಇಲ್ಲ. ಕಾರ್ಯಕ್ರಮಕ್ಕೆ ಖರ್ಚು ಮಾಡಿದ ವಿವರಗಳನ್ನು ಟ್ರಸ್ಟ್ ವತಿಯಿಂದ ಪಡೆಯಬಹುದು. ಮೇವಾನಿ ಹಾಗೂ ಕನ್ನಯ್ಯರನ್ನು ಗೌರಿ ಮಕ್ಕಳಂತೆ ಭಾವಿಸಿದ್ದರು. ಅದೇ ಪ್ರೀತಿಗಾಗಿ ಇವರು ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಗೌರಿಯನ್ನು ಮೌನ ಮಾಡಿದಾಗ ನಾನು, ನನ್ನಂತಹ ಹಲವರು ಹುಟ್ಟುತ್ತಾರೆ: ಪ್ರಕಾಶ್ ರೈ
ಟ್ರಸ್ಟ್ ಮೂಲಕ ನಿರಂತರವಾಗಿ ಗೌರಿ ಅವರ ಸಿದ್ಧಾಂತಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಮುಂದುವರೆಸುತ್ತೇವೆ. ವಿಶೇಷ ತನಿಖಾ ದಳ ಪ್ರಕರಣದ ತನಿಖೆಯನ್ನು ಮುಂದುವರೆಸುತ್ತಿದ್ದು, ಪ್ರತಿ ವಾರ ನಮಗೇ ತನಿಖೆಯ ಪ್ರಗತಿಯನ್ನು ತಿಳಿಸುತ್ತಿದ್ದಾರೆ. ಪೊಲೀಸ್ ತನಿಖೆ ನಮಗೇ ತೃಪ್ತಿ ನೀಡಿದೆ. ಆದರೆ ಕೊಲೆ ನಡೆದಿರುವುದು ವಯಕ್ತಿಕ ಕಾರಣದಿಂದ ಅಲ್ಲ. ಅದ್ದರಿಂದ ತನಿಖೆ ನಡೆಸುಲು ಸಮಯ ತೆಗೆದುಕೊಳ್ಳುತ್ತದೆ ಎಂಬ ಅರಿವಿದೆ ಎಂದರು. ಇದನ್ನೂ ಓದಿ: `ಗೌರಿ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದ ಸಹೋದರ ಇಂದ್ರಜಿತ್ ಲಂಕೇಶ್
ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಉದ್ದೇಶದ ಹಿಂದೆ ಬೇರೆಯಾದ್ದೆ ಕಾರಣಗಳು ಇರಬಹುದು. ಏಕೆಂದರೆ ಕಳೆದ ಹಲವು ವರ್ಷಗಳಲ್ಲಿ ಸಿಬಿಐಗೆ ವಹಿಸಿದ್ದ ಪ್ರಕರಣಣಗಳಲ್ಲಿ ಯಾವುದೇ ಫಲಿತಾಂಶ ಲಭಿಸಿಲ್ಲ. ವಿಶೇಷ ತನಿಖಾ ದಳದ ವಿಚಾರಣೆ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಹಂತಕರನ್ನು ಬಂಧಿಸುವ ವಿಶ್ವಾಸವಿದೆ. ಪ್ರಕರಣವನ್ನು ಮತ್ತೆ ಸಿಬಿಐ ಗೆ ವಹಿಸುವುದರಿಂದ ವಿಚಾರಣೆ ಮತ್ತೆ ಒಂದು ವರ್ಷ ಹಿಂದುಳಿಯುವ ಸಂಭವವಿದೆ ಎಂದು ಹೇಳಿದರು.