ಬೆಂಗಳೂರು: ಕನ್ನಡ ಕಿರುತೆರೆ ಜನಪ್ರಿಯ ಗಟ್ಟಿಮೇಳ ಧಾರಾವಾಹಿ ನಟ ರಕ್ಷಿತ್ ಅಂಡ್ ಗ್ಯಾಂಗ್ ಕುಡಿದು ರಂಪಾಟ ಮಾಡಿದ್ದು ಪ್ರಕರಣ ದಾಖಲಾಗಿದೆ.
Advertisement
ನಾಗರಬಾವಿ ಬಳಿಯಲ್ಲಿ ಶೂಟಿಂಗ್ ಮಾಡುತ್ತಿದ್ದ ಗಟ್ಟಿಮೇಳ ಸೀರಿಯಲ್ ತಂಡ ಕೆಂಗೇರಿ ಬಳಿ ಜಿಂಜರ್ ಲೇಕ್ ವ್ಯೂ ಹೋಟೆಲ್ಗೆ ರಾತ್ರಿ ಬಂದಿದ್ದರು. ಈ ವೇಳೆ ಮದ್ಯ ಸೇವಿಸಿ ರಕ್ಷಿತ್ ಅಂಡ್ ಗ್ಯಾಂಗ್ ಗಲಾಟೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರ ಜೊತೆಗೆ ರಕ್ಷಿತ್ ಊಟ ಮಾಡುವುದಕ್ಕೆ ಬಂದಿದ್ದೆವು ಲೇಟ್ ಆಯಿತು ಎಂದು ಮಾತಿನ ಚಕಮಕಿ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಾಲಿ ಸಂಪ್ರದಾಯ ಮದುವೆಯ ಫೋಟೋ ಶೇರ್ ಮಾಡಿದ ಮೌನಿ ರಾಯ್
Advertisement
Advertisement
ಕುಡಿದ ಆರೋಪ ಹಿನ್ನೆಲೆ ಎಲ್ಲರಿಗೂ ಪೊಲೀಸರು ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದು, ರಕ್ಷಿತ್, ರಂಜನ್, ಅನುಷಾ, ಅಭಿಷೇಕ್, ಶರಣ್ಯ ಸೇರಿದಂತೆ 7 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ನೈಟ್ ಕರ್ಫ್ಯೂ ಜಾರಿಯಲ್ಲಿದ್ದರೂ ಪಾರ್ಟಿಗೆ ಅನುಮತಿ ನೀಡಿದ್ದಕ್ಕೆ ಹೋಟೆಲ್ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಬಿಡುಗಡೆ ಮುಂದೂಡಿಕೆ!