ಕನ್ನಡ ಕಿರುತೆರೆಯ `ಗಟ್ಟಿಮೇಳ’ ಸೀರಿಯಲ್ ಮೂಲಕ ಮನೆ ಮಾತಾಗಿರುವ ನಟಿ ನಿಶಾ ರವಿಕೃಷ್ಣನ್ ತೆಲುಗು ಕಿರುತೆರೆಯಲ್ಲೂ ಛಾಪೂ ಮೂಡಿಸುತ್ತಿದ್ದಾರೆ. ಸದ್ಯ ಮಾಲಿವುಡ್ ಸ್ಟಾರ್ ದುಲ್ಕರ್ ಸಲ್ಮಾನ್ಗೆ ನಿಶಾ ರವಿಕೃಷ್ಣನ್ ಜೊತೆಯಾಗಿದ್ದಾರೆ.
`ಗಟ್ಟಿಮೇಳ’ ಸೀರಿಯಲ್ನ ಅಮೂಲ್ಯ ಆಗಿ ಸಾಕಷ್ಟು ಅಭಿಮಾನಿಗಳ ಮನಗೆದ್ದಿರುವ ನಿಶಾ ರವಿಕೃಷ್ಣನ್ ಈಗ ತೆಲುಗು ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಈ ವೇಳೆ ತೆಲುಗಿನ ಶೋವೊಂದರಲ್ಲಿ ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ `ಸೀತಾ ರಾಮಂ’ ಚಿತ್ರದ ಪ್ರಚಾರಕ್ಕಾಗಿ ಬಂದಿದ್ದರು. ಈ ವೇಳೆ ದುಲ್ಕರ್ ಸಲ್ಮಾನ್ ಅವರನ್ನು ನಿಶಾ ಭೇಟಿಯಾಗಿದ್ದಾರೆ. ಇದನ್ನೂ ಓದಿ:ನಿರ್ದೇಶಕ ಹೇಳಿದ ಮಾತು ಕೇಳದೇ ಆಸ್ಪತ್ರೆ ಸೇರಿದ ಕಿರಿಕ್ ನಟಿ ಸಂಯುಕ್ತ ಹೆಗ್ಡೆ
View this post on Instagram
ಶೋನಲ್ಲಿ ಸಹನಟ ಸಿದ್ದು ಜತೆ ನಿಶಾ ಹೆಜ್ಜೆ ಹಾಕಿದ್ದರು. ನಿಶಾ ಅವರ ಡ್ಯಾನ್ಸ್ ನೋಡಿ ದುಲ್ಕರ್ ಸಲ್ಮಾನ್ ಕೂಡ ಮೆಚ್ಚುಗೆ ಸೂಚಿಸಿದ್ದರು. ಈ ವೇಳೆ ದುಲ್ಕರ್ ಸಲ್ಮಾನ್ ಮಾತಿಗೆ ನಿಶಾ ಸಖತ್ ಖುಷಿಪಟ್ಟಿದ್ದಾರೆ. ಇಂದು 36ನೇ ವಸಂತಕ್ಕೆ ಕಾಲಿಟ್ಟಿರುವ ದುಲ್ಕರ್ ಸಲ್ಮಾನ್ಗೆ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ದುಲ್ಕರ್ ಜತೆಗಿನ ಫೋಟೋ ಹಂಚಿಕೊಂಡು ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.