ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರು ‘ಕೃಷ್ಣಂ ಪ್ರಣಯ ಸಖಿ’ಯಾಗಿ ಎಂಟ್ರಿ ಕೊಡುತ್ತಾ ಇರೋದು ಗೊತ್ತೆ ಇದೆ. ಲವರ್ ಬಾಯ್ ಗಣೇಶ್‌ಗೆ ಜೋಡಿಯಾಗಿ ಮಾಳವಿಕಾ ಮಾತ್ರವಲ್ಲ ಇದೀಗ ಮತ್ತೋರ್ವ ಯುವ ನಟಿಯ ಎಂಟ್ರಿಯಾಗಿದೆ. ಗೋಲ್ಡನ್ ಹೀರೋ ಗಣಿಗೆ ನಾಯಕಿಯಾಗಿ ಕಿರುತೆರೆಯ ಬ್ಯೂಟಿ ಶರಣ್ಯ ಶೆಟ್ಟಿ (Sharanya Shetty) ಕಾಣಿಸಿಕೊಳ್ತಿದ್ದಾರೆ.
ನಟ ಗಣೇಶ್ ಅವರ ಹುಟ್ಟುಹಬ್ಬದಂದು ‘ಕೃಷ್ಣಂ ಪ್ರಣಯ ಸಖಿʼ (Krishnam Pranaya Sakhi) ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿತ್ತು. ಮೊದಲ ಪೋಸ್ಟರ್ ಲುಕ್‌ನಿಂದಲೇ ಗಣೇಶ್ ಅಭಿಮಾನಿಗಳ ಗಮನ ಸೆಳೆದಿದ್ದರು. ಗಣೇಶ್ ಅಭಿನಯದ 41ನೇ ಸಿನಿಮಾಗೆ ‘ಕೃಷ್ಣಂ ಪ್ರಣಯ ಸಖಿ’ ಎಂದು ಟೈಟಲ್ ಇಡಲಾಗಿದೆ. ಈ ಪೋಸ್ಟರ್‌ನಲ್ಲಿ ಗಣೇಶ್ ಮನೆ ಕೆಲಸ ಮಾಡುವ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೂಟ್ ಧರಿಸಿ ಹೈ ಫೈ ಆಗಿರುವ ಗಣೇಶ್ ಕೈಯಲ್ಲಿ ಬಕೆಟ್, ಪೊರಕೆ, ನೆಲ ಒರೆಸುವ ಸ್ಟಿಕ್ ಹಿಡಿದು ಹೊರಟಿದ್ದಾರೆ. ಟೈಟಲ್ ಕೇಳಿದ್ರೆ ಗಣೇಶ್ ಲವರ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಇದನ್ನೂ ಓದಿ:‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ: ರೆಟ್ರೋ ಲುಕ್ ಫೋಟೋ ಲೀಕ್
ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಗಣೇಶ್‌ಗೆ ಜೋಡಿಯಾಗಿ ಮಾಳವಿಕಾ ಸಾಥ್ ನೀಡಿದ್ದಾರೆ. ಗಣೇಶ್- ಮಾಳವಿಕಾ (Malavika) ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಹೀಗಿರುವಾಗ ಮತ್ತೊರ್ವ ನಾಯಕಿಯ ಎಂಟ್ರಿಯಾಗಿದೆ. ಕಿರುತೆರೆಯ ‘ಗಟ್ಟಿಮೇಳ’ ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ಮೋಡಿ ಮಾಡಿದ್ದ ಶರಣ್ಯ ಶೆಟ್ಟಿ ಈಗ ಗಣೇಶ್ ಜೊತೆ ನಟಿಸುವ ಸುವರ್ಣಾವಕಾಶ ಗಿಟ್ಟಿಸಿಕೊಂಡಿದ್ದಾರೆ.
ಈಗಾಗಲೇ ಶರಣ್ಯ, 1980, ಪೆಂಟಗನ್, ಹುಟ್ಟುಹಬ್ಬದ ಶುಭಾಶಯಗಳು, ರವಿ ಬೋಪಣ್ಣ, ಸ್ಪೂಕಿ ಕಾಲೇಜ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ನಟಿ ಶರಣ್ಯ ಜೀವ ತುಂಬಲಿದ್ದಾರೆ. ರೊಮ್ಯಾಂಟಿಕ್-ಕಾಮಿಡಿಯಾಗಿರೋ ಈ ಸಿನಿಮಾ ಜುಲೈ ಅಂತ್ಯದಲ್ಲಿ ಮತ್ತೆ ಶೂಟಿಂಗ್ ಶುರುವಾಗಲಿದೆ. ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಮಾಳವಿಕಾ ನಾಯರ್, ಶರಣ್ಯ ಶೆಟ್ಟಿ ಈ ಜೋಡಿಯನ್ನ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.