ಗದಗ: ಇಡೀ ದೇಶದಲ್ಲಿ ತೈಲ ಹಾಗೂ ಅನಿಲ ಬೆಲೆ ಗಗನಕ್ಕೆ ಏರುತ್ತಿದೆ. ಜನಸಾಮಾನ್ಯರು ಬೆಲೆ ಏರಿಕೆಯ ಬಲೆಯಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಆದರೆ ಈ ಜಿಲ್ಲೆಯಲ್ಲಿ ಮಾತ್ರ ಕಾಳಸಂತೆಯಲ್ಲಿ ಅನಿಲ ಮಾರಾಟದ ಕಳ್ಳಾಟ ಜೋರಾಗಿ ನಡೆದಿದೆ. ಈ ಗ್ಯಾಸ್ ಕಳ್ಳರ ಗ್ಯಾಂಗ್ ಬಗ್ಗೆ ಪಬ್ಲಿಕ್ ಟಿವಿ ಕುಟುಕು ಕಾರ್ಯಾಚರಣೆಯ ಕ್ಯಾಮರಾ ಕಣ್ಣಿಗೆ ಬಿದ್ದಿದೆ.
ಗದಗ ಜಿಲ್ಲೆಯಲ್ಲಿ ಈ ಗ್ಯಾಸ್ ರಿಫಿಲ್ಲಿಂಗ್ ದಂಧೆ ಕಾಮನ್. ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಿಂದ ಈ ಧಂದೆ ಬಯಲಾಗಿದೆ. ಅನಿಲಭಾಗ್ಯ, ಉಜ್ವಲ ಯೋಜನೆಯಂತಹ ಯೋಜನೆಗಳು ಈ ರೀತಿಯಾಗಿ ದುರುಪಯೋಗ ಆಗುತ್ತಿವೆ. ಗದಗ-ಬೆಟಗೇರಿ ಅವಳಿ ನಗರದ ಅನೇಕ ಮನೆ ಹಾಗೂ ಗೋದಾಮುಗಳಲ್ಲಿ ಅಕ್ರಮವಾಗಿ ಗ್ಯಾಸ್ ತುಂಬುವ ದಂಧೆ ಜೋರಾಗಿ ನಡೆಯುತ್ತಿದೆ.
Advertisement
Advertisement
ಟ್ಯಾಗೋರ್ ರೋಡ್‍ನ ಮನೆಯೊಂದರಲ್ಲಿ ನಡೆಯುತ್ತಿದ್ದ ದಂಧೆಯತ್ತ ಪಬ್ಲಿಕ್ ಟಿವಿ ಕ್ಯಾಮರಾ ಚಿತ್ತ ನೆಟ್ಟಿತ್ತು. ಆದ್ರೆ ದಂಧೆಕೋರರಿಗೆ ಅನುಮಾನ ಬಂದು ಏನುಬೇಕ್ರಿ, ಗ್ಯಾಸ್ ಬೇಕಾ? 15-20 ನಿಮಿಷ ಬಿಟ್ಟು ಬನ್ನಿ ಎಂದು ಸಿಲಿಂಡರ್ ಇಟ್ಟುಕೊಂಡು ಕಳುಹಿಸಿದರು. ಇದಕ್ಕೆ ಲೈಸನ್ಸ್ ಪಡಿಬೇಕಾ? ನಿಮಗೆಷ್ಟು ಲಾಭ ಎಂದು ಅಮಾಯಕರಂತೆ ಕೇಳಿದಾಗ ಸಿಕ್ಕ ಉತ್ತರ ದಂಗು ಬಡಿಸುವಂತಿತ್ತು. ಅಧಿಕಾರಿಗಳಿಗೆ, ಪೊಲೀಸರಿಗೆ ಮಾಮೂಲಿ ಹೋಗೋ ಸತ್ಯ ಬಯಲಾಯ್ತು. ಲಂಚ ಕೊಡ್ಲೇಬೇಕು, ಇಲ್ಲಾಂದೆ ಬದುಕೋಕೆ ಬಿಡಲ್ಲ. ಒಂದು ಗ್ಯಾಸ್ ಖಾಲಿಯಾದ್ರೆ 300 ರೂಪಾಯಿವರೆಗೆ ಉಳಿಯುತ್ತೆ ಅಂತಾರೆ ದಂಧೆಕೊರರು.
Advertisement
ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ ಆಟೋಗಳಿಗೆ ಈ ಎಲ್‍ಪಿಜಿಯನ್ನು ಕೇಜಿ ಲೆಕ್ಕದಲ್ಲಿ ಬಿಕರಿ ಮಾಡುತ್ತಾರೆ. ಕೆಜಿ ಗ್ಯಾಸ್‍ಗೆ 100 ರೂಪಾಯಿಂದ 130 ರೂಪಾಯಿ ವರೆಗೆ ಮಾರಾಟ ಮಾಡಲಾಗುತ್ತದೆ. ದಂಧೆಕೋರರು ಮನೆಯ ಅನೇಕ ಸದಸ್ಯರ ಹೆಸರಿನಲ್ಲಿ ಗ್ಯಾಸ್ ಪಡೆದು ನಂತರ ಈ ತರನಾಗಿ ಅಕ್ರಮವಾಗಿ ಮಾರಾಟ ಮಾಡ್ತಾರೆ. ಈ ಮೂಲಕ ಸಕ್ರಮದ ಹೆಸರಲ್ಲೆ ಅಕ್ರಮಕ್ಕಿಳಿದಿದ್ದಾರೆ. ಇದೆಲ್ಲಾ ಗೊತ್ತಿದ್ದೂ ಸಂಬಂಧಿಸಿದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮಾತ್ರ ಕಣ್ ಮುಚ್ಚಿ ಕುಳತಿದ್ದಾರೆ.
Advertisement
ಗ್ಯಾಸ್ ಮಾಫಿಯಾ ಬಗ್ಗೆ ಬಗೆದಷ್ಟು ಬಗೆದಷ್ಟು ಬಹಳಷ್ಟು ಮಾಹಿತಿ ದೊರೆಯುತ್ತದೆ. ಇದೆಲ್ಲಾ ಪಬ್ಲಿಕ್ ಟಿವಿ ನಡೆಸಿದ ಸ್ಟಿಂಗ್ ಆಪ್ರೆಷನ್ ಮೂಲಕ ಬಯಲಾಗಿದೆ. ಈ ಕಳ್ಳ ದಂಧೆಯ ಪಾಲುದಾರ ಅಧಿಕಾರಿಗಳು ಇನ್ಮೆಲೆದ್ರು ಎಚ್ಚೆತ್ತು ಕ್ರಮಕ್ಕೆ ಮುಂದಾಗ್ತಾರಾ ಕಾದು ನೋಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv