ಅಮರಾವತಿ: ಉಡುಪು ತಯಾರಿಕಾ ಘಟಕದಲ್ಲಿ ಅನಿಲ ಸೋರಿಕೆಯಾಗಿದ್ದು 50ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥರಾದ ಘಟನೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಬ್ರಾಂಡಿಕ್ಸ್‍ನಲ್ಲಿ ನಡೆದಿದೆ.
ಗ್ಯಾಸ್ ಸೋರಿಕೆಯಾದ ಬೆನ್ನಲ್ಲೇ ಕಾರ್ಮಿಕರು ಅಸ್ವಸ್ಥರಾಗ ತೊಡಗಿದರು. ಈ ಹಿನ್ನೆಲೆಯಲ್ಲಿ ಕಾರ್ಮಿಕರನ್ನು ಸ್ಥಳೀಯ ವೈದ್ಯಕೀಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು.
Advertisement
Advertisement
ಘಟನೆ ಸಂಬಂಧಿಸಿ ಅನಕಪಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದು, ಬ್ರ್ಯಾಂಡಿಕ್ಸ್ ಆವರಣದಲ್ಲಿ ಅನಿಲ ಸೋರಿಕೆ ಸಂಭವಿಸಿದೆ. 50 ಜನರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ಹೊರಟ ಕ್ರೂಸರ್ ಪಲ್ಟಿ- ಓರ್ವ ಸಾವು, ಮೂವರಿಗೆ ಗಂಭೀರ ಗಾಯ
Advertisement
ಜೂನ್ 3 ರಂದು ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ಸಂಭವಿಸಿದ್ದು, 200 ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಪ್ರಜ್ಞಾಹೀನರಾಗಿದ್ದರು. ಈ ಪ್ರದೇಶದಲ್ಲಿನ ಪೋರಸ್ ಲ್ಯಾಬೋರೇಟರೀಸ್ ಘಟಕದಿಂದ ಅಮೋನಿಯಾ ಅನಿಲ ಸೋರಿಕೆಯಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
Advertisement
ಹೈದರಾಬಾದ್‍ನಲ್ಲಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯ ತಜ್ಞರ ತಂಡವು ಲ್ಯಾಬ್‍ಗೆ ಭೇಟಿ ನೀಡಿ ಅನಿಲ ಸೋರಿಕೆಯ ಕಾರಣವನ್ನು ನಿರ್ಧರಿಸಲು ಪರೀಕ್ಷೆಗಳನ್ನು ನಡೆಸಿತ್ತು. ಇದರಿಂದಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಲ್ಯಾಬ್ ಅನ್ನು ಮುಚ್ಚಲು ಆದೇಶಿಸಿದೆ. ಇದನ್ನೂ ಓದಿ: ಎಸ್‍ಡಿಪಿಐ, ಪಿಎಫ್‍ಐ ಅವರನ್ನ ಸಾಕ್ತಿರೋದೆ ಬಿಜೆಪಿ: ಸಿದ್ದರಾಮಯ್ಯ