DharwadDistrictsKarnatakaLatestMain Post

ಎಸ್‍ಡಿಪಿಐ, ಪಿಎಫ್‍ಐ ಅವರನ್ನ ಸಾಕ್ತಿರೋದೆ ಬಿಜೆಪಿ: ಸಿದ್ದರಾಮಯ್ಯ

Advertisements

ಹುಬ್ಬಳ್ಳಿ: ಪಿಎಫ್‍ಐ, ಎಸ್‍ಡಿಪಿಐ ವಿರುದ್ಧ ದೇಶದ ವಿರೋಧಿ ಮತ್ತು ಕೋಮು ಗಲಭೆಯ ಸಾಕ್ಷಿ ಇದ್ದರೆ ಬ್ಯಾನ್ ಮಾಡಲಿ. ಯಾವ ಸಂಘಟನೆಯಾದರೂ ಕೋಮು ಪ್ರಚೋದನೆ ಮಾಡಿದರೆ ಬ್ಯಾನ್ ಮಾಡಲಿ, ಆದರೆ ಇದು ಆಗುತ್ತಿಲ್ಲ ಎಸ್‍ಡಿಪಿಐ, ಪಿಎಫ್‍ಐ ಅವರನ್ನು ಸಾಕುತ್ತಿರುವುದೇ ಬಿಜೆಪಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

ಈ ಬಗ್ಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗುಪ್ತಚರ ಇಲಾಖೆ ಫೇಲ್ ಆಗಿದೆ. ಅಂದರೆ ಸಿಎಂ ಕೂಡಾ ಫೇಲ್ ಆಗಿದ್ದಾರೆ ಅಂತಾನೇ ಅರ್ಥ. ಮೂರು ಕೊಲೆಯ ಜವಾಬ್ದಾರಿಯನ್ನು ಸಿಎಂ ಹಾಗೂ ಗೃಹ ಸಚಿವರು ಹೊರಬೇಕು. ಆದರೆ ಅವರು ಭಂಡರು, ರಾಜೀನಾಮೆ ಕೊಡಲ್ಲ. ಸರ್ಕಾರದ ವಿರುದ್ಧ ಸಂಘ ಪರಿವಾರವೇ ಪ್ರತಿಭಟನೆ ಮಾಡುತ್ತಿದೆ ಅಂದರೆ ಏನ್ ಅರ್ಥ. ಸರ್ಕಾರ ವಿಫಲ ಆಗಿದ್ದಕ್ಕೆ ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ರಕ್ಷಣೆ ಇಲ್ಲಾ ಅಂದರೆ ಬೇರೆಯವರ ಕಥೆಯೇನು ಎಂದು ಕಿಡಿಕಾರಿದರು.

bjP

ರಾಜ್ಯದ ಜನರನ್ನು ರಕ್ಷಣೆ ಮಾಡಲು ಇವರ ಕೈಯಲ್ಲಿ ಆಗುವುದಿಲ್ಲ. ಬೊಮ್ಮಾಯಿ ಒಂದು ಧರ್ಮದ ಮುಖ್ಯಮಂತ್ರಿ ಅಲ್ಲ. ಪ್ರವೀಣ್ ಮನೆಗೆ ಹೋಗಿದ್ದು ಸರಿ. ಆದರೆ ಎಲ್ಲರ ಮನೆಗೂ ಹೋಗಬೇಕಿತ್ತು. ನಾವು ಸೆಕ್ಟೇರಿಯನ್ ಸಿಎಂ ಅಂತ ಕರೆಯಬೇಕಾಗುತ್ತದೆ. ಕೊಲೆಗೆ ಪರಿಹಾರ ನೀಡುತ್ತಿರಲಿಲ್ಲ. ಈಗ ಅದನ್ನು ಪ್ರಾರಂಭಿಸಿದ್ದಾರೆ. ಅದು ಅವರಿಗೆ ಬೇಕಾದವರಿಗೆ ಮಾತ್ರ ಕೊಡುತ್ತಿದ್ದಾರೆ. ಜನತೆಗೆ ತೆರಿಗೆ ಹಣ ತಾರತಮ್ಯ ಮಾಡಬಾರದು. ಎಲ್ಲರನ್ನು ಸಮಾನತೆಯಿಂದ ಕಾಣೋದೆ ರಾಜಧರ್ಮ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಮಳೆ ಹಾನಿ – ಇಲ್ಲಿಯವರೆಗೆ ಏನು ಹಾನಿಯಾಗಿದೆ? ಸಿಎಂ ಸಭೆಯಲ್ಲಿ ಏನು ಚರ್ಚೆಯಾಗಿದೆ?

Live Tv 

Leave a Reply

Your email address will not be published.

Back to top button