ಕೇಪ್ ಟೌನ್: ವಿಷಾನಿಲ ಸೋರಿಕೆಯಿಂದಾಗಿ (Gas Leak) ಕನಿಷ್ಠ 16 ಜನರು ದುರ್ಮರಣ ಹೊಂದಿರುವ ಘಟನೆ ದಕ್ಷಿಣ ಆಫ್ರಿಕಾದ (South Africa) ಜೋಹನ್ಸ್‌ಬರ್ಗ್‌ನ ಬೋಕ್ಸ್‌ಬರ್ಗ್ ಬಳಿ ನಡೆದಿದೆ.
ಅನಿಲ ಸೋರಿಕೆ ಶಂಕಿತ ಅಕ್ರಮ ಗಣಿಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿರಬಹುದು ಎಂದು ದಕ್ಷಿಣ ಆಫ್ರಿಕಾದ ಮಾಧ್ಯಮಗಳು ವರದಿ ಮಾಡಿವೆ. ಘಟನೆಯಲ್ಲಿ 1 ವರ್ಷದ ಮಗು ಸೇರಿದಂತೆ 16 ಜನರು ಸಾವನ್ನಪ್ಪಿದ್ದಾರೆ. ಅನಿಲ ಸೋರಿಕೆಯಿಂದಾಗಿ ಮೃತದೇಹಗಳು ಪ್ರದೇಶದಾದ್ಯಂತ ಅಲ್ಲಲ್ಲಿ ಚದುರಿದ ಸ್ಥಿತಿಯಲ್ಲಿ ಕಾಣಸಿಕ್ಕಿವೆ ಎನ್ನಲಾಗಿದೆ. ಇದನ್ನೂ ಓದಿ: 80 ಅಡಿ ಆಳದ ಕಂದಕಕ್ಕೆ ಉರುಳಿದ ಬಸ್ – 27 ಮಂದಿ ದಾರುಣ ಸಾವು, 17 ಮಂದಿಗೆ ಗಾಯ
Advertisement
Advertisement
ದುರಂತದಲ್ಲಿ 24 ಜನರು ಮೃತಪಟ್ಟಿದ್ದಾರೆ ಎಂದು ಮೊದಲಿಗೆ ವರದಿಯಾಗಿತ್ತು. ಬಳಿಕ ರಕ್ಷಣಾ ತಂಡ ಮೃತದೇಹಗಳನ್ನು ಮರುಎಣಿಕೆ ಮಾಡಿದ್ದು, ಮೃತರ ಸಂಖ್ಯೆಯನ್ನು 16 ಎಂದು ಖಚಿತಪಡಿಸಲಾಗಿದೆ. ಇದನ್ನೂ ಓದಿ: ಮಣಿಪುರ ಹಿಂಸಾಚಾರ – ಇಂಟರ್ನೆಟ್ ಸೇವೆ ನಿಷೇಧ ಜು.10 ರವರೆಗೆ ವಿಸ್ತರಣೆ
Advertisement
ಸದ್ಯ ಅನಿಲ ಸೋರಿಕೆ ಇದೀಗ ನಿಂತಿದ್ದು, 100 ಮೀ. ಆಸುಪಾಸಿನಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Web Stories