ಬೆಂಗ್ಳೂರಿನ ಮನೆಯಲ್ಲಿ ಭೀಕರ ಸಿಲಿಂಡರ್ ಸ್ಫೋಟ – 8 ಮಂದಿಗೆ ಗಂಭೀರ ಗಾಯ

Public TV
1 Min Read
cylinder blast

ಬೆಂಗಳೂರು: ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು 8 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು (ಮಂಗಳವಾರ) ಮುಂಜಾನೆ ಯಲಹಂಕದ ಎಲ್‌ಬಿಎಸ್‌ನಲ್ಲಿ ನಡೆದಿದೆ.

ಅಫರ್ವಾಜ್, ಸಲ್ಮಾ, ಶಾಹಿದ್, ಫಸಿಯಾ, ಅಸ್ಮಾ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಇಂದಿನಿಂದ 3 ದಿನ ಪೀಣ್ಯ ಫ್ಲೈಓವರ್ ಬಂದ್

cylinder blast 1

ಸಿಲಿಂಡರ್ ಸ್ಫೋಟದಿಂದಾಗಿ ಒಬ್ಬರಿಗೆ 60% ರಷ್ಟು ಸುಟ್ಟಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರನ್ನು ಯಲಹಂಕ ಸರ್ಕಾರಿ ಆಸ್ಪತ್ರಗೆ ದಾಖಲು ಮಾಡಲಾಗಿದೆ. ಉಳಿದವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಗಾಯಾಳುಗಳನ್ನು ಕಂಡ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಮನೆಯ ಅವಶೇಷಗಳನ್ನು ಕಂಡು ಗಾಬರಿಯಲ್ಲಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ಗೆ ಫುಡ್‌ ಡೆಲಿವರಿ ಬಾಯ್‌ ಬಲಿ

ಒಂದು ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆ ಛಿದ್ರವಾಗಿದೆ. ಪಕ್ಕದ ನಾಲ್ಕು ಮನೆಗಳಿಗೂ ಹಾನಿಯಾಗಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು, ಕಿಟಕಿಗಳು, ಬಾಗಿಲುಗಳು ಪೀಸ್ ಪೀಸ್ ಆಗಿವೆ. ಮನೆಯಲ್ಲಿನ ವಿದ್ಯುತ್ ಮೀಟರ್ ಬಾಕ್ಸ್ಗಳಿಗೂ ಹಾನಿಯಾಗಿದೆ.

ವಿದ್ಯುತ್ ಕೇಬಲ್‌ಗಳಿಗೂ ಹಾನಿಯಾಗಿದ್ದು, ತಕ್ಷಣಕ್ಕೆ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮನೆಗಳು ಶೇಕ್ ಆಗಿವೆ. ಒಟ್ಟು 5 ಮನೆಗಳಿರೋ ಜಾಗ ಇದು.

Share This Article